ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದರೇ ಮರುಕ್ಷಣವೇ ಪ್ರತಿದಾಳಿ – ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ ಜೋ ಬೈಡೆನ್
ಅಮೆರಿಕಾ : ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.. ಈ ನಡುವೆ ಅಫ್ಗಾನ್ ನಲ್ಲಿನ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ನಾವು ತೆಗೆದುಕೊಂಡಿರುವ ನಿರ್ಧಾಕ್ಕೆ ಈಗಲೂ ಬದ್ಧರಾಗಿದ್ದೇವೆ. ಅಫ್ಘಾನಿಸ್ತಾನದಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.
ಅಫ್ಗಾನ್ ನಾಗರಿಕರ ಸ್ಥಳಾಂತರ ಕಠಿಣ , ವಿಶ್ವದಲ್ಲೇ ಈ ಮಟ್ಟದ ಶಕ್ತಿ ಪ್ರದರ್ಶಿಸುವ ಸಾಮರ್ಥ್ಯವಿರುವ ಏಕೈಕ ದೇಶ ಅಮೆರಿಕ – ಜೋ ಬೈಡೆನ್
ಅಲ್ಲದೇ ನಮ್ಮ ಸೈನಿಕರ ಮೇಲೆ ದಾಳಿಯಾದ ಮರುಕ್ಷಣವೇ ಪ್ರತಿದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 18,000 ಅಮೆರಿಕನ್ನರು, 6 ಸಾವಿರ ಸೈನಿಕರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ ಎಂದಿರುವ ಬೈಡೆನ್ ಅಮೆರಿಕನ್ನರ ಮೇಲಿನ ಯಾವುದೇ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಾವು ಹೇಳಿದ್ದನ್ನ ಮಾಡುತ್ತೇವೆ. ಭಯೋತ್ಪಾದನೆಯನ್ನು ಕೊನೆಗಾಣಿಸುವ ಸಮಯವಾಗಿದೆ. ಕಾಬೂಲ್ ಏರ್ಪೋರ್ಟ್ ಸುರಕ್ಷಿತವಾಗಿಟ್ಟಿದ್ದೇವೆ. ನಾವು ಆಫ್ಘಾನಿಸ್ತಾನದ ಜನರ ಜೊತೆಗೆ ಇದ್ದೇವೆ. ಅಮೆರಿಕಕ್ಕೆ ಬರಬೇಕು ಎನ್ನುವ ನಾಗರಿಕರನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಮುಂದಿನ ವಾರ ನಡೆಯುವ ಜಿ-7 ರಾಷ್ಟ್ರಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತಾಲಿಬಾನ್ ಉಗ್ರರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ ಆಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗಲು ಬಿಡುವುದಿಲ್ಲ. ತಾಲಿಬಾನ್ ಸಂಘಟನೆ ಯಾವತ್ತಿದ್ದರೂ ಅಮೆರಿಕ ವಿರೋಧಿಯೇ. ಆಫ್ಘಾನಿಸ್ತಾನದಲ್ಲಿ ಸ್ಥಳಾಂತರ ಕಾರ್ಯಾಚರಣೆ ಅಪಾಯಕಾರಿಯಾಗಿದೆ. ಅಂತಿಮ ಫಲಿತಾಂಶ ಏನಾಗುತ್ತದೆ ಎಂದು ನಾನು ಭರವಸೆ ನೀಡುವುದಿಲ್ಲ. ಮಿತ್ರರಾಷ್ಟ್ರಗಳು ನಮ್ಮ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿಲ್ಲ , ಪ್ರಶ್ನಿಸುವುದಿಲ್ಲ ಎಂದುಕೊಡಿದ್ದೇವೆ ಎಂದು ಹೇಳಿದ್ದಾರೆ.