ಕಾಬೂಲ್ನಿಂದ 5 ದಿನಗಳಲ್ಲಿ 7000 ಜನರ ಸ್ಥಳಾಂತರಿಸಿದ ಅಮೆರಿಕಾ ಸೇನೆ
ಅಫ್ಘಾನಿಸ್ತಾನದ ಕಾಬೂಲ್ನಿಂದ ಕಳೆದ 5 ದಿನಗಳಲ್ಲಿ ಸುಮಾರು 7000 ಜನರನ್ನ ಯುಎಸ್ ಸೇನೆ ಸ್ಥಳಾಂತರಿಸಿದೆ. ಕಾರ್ಗೋ ವಿಮಾನದ ಮೂಲಕ ಕರೆದೊಯ್ಯಲಾಗ್ತಿದೆ ಎಂದು ಪೆಂಟಗನ್ ಮಾಹಿತಿ ನೀಡಿದೆ. ಯುಎಸ್ ಸ್ವಯಂ ಪಡೆಗಳು ಎರಡು ವಾರಗಳಿಗಿಂತ ಮುಂಚೆಯೇ ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುವ ಕೆಲಸ ಮಾಡ್ತಿದೆ ಎಂದು ಎಂದು ಪೆಂಟಗನ್ ತಿಳಿಸಿದೆ.
ಅಲ್ಲದೇ ಯುಎಸ್ ಮಿಲಿಟರಿ ಪ್ರಸ್ತುತ ಕಾಬೂಲ್ನಿಂದ ದಿನಕ್ಕೆ ಸುಮಾರು 5,000 ರಿಂದ 9,000 ಜನರನ್ನು ಸ್ಥಳಾಂತರಗೊಳಿಸಬಲ್ಲದ ಆದ್ರೆ ಅಫ್ಗಾನ್ ನಿಂದ ತೆರಳಲು ಸಿದ್ಧರಾಗಿರುವ ಜನಸಂಖ್ಯೆ ಮೇಲೆ ಅದು ನಿರ್ಧಾರವಾಗಿರುತ್ತೆ. ಕಳೆದ 24 ಗಂಟೆಗಳಲ್ಲಿ ಸಿ -17 ವಿಮಾನದಲ್ಲಿ 2,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ, ಅವರಲ್ಲಿ 300 ಜನರು ಅಮೆರಿಕನ್ನರಾಗಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.
ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಅವರು ಈ ಬಗ್ಗೆ ಮಾತನಾಡಿ ಅಫ್ಘಾನಿಸ್ತಾನದಲ್ಲಿ ಎಷ್ಟು ಯುಎಸ್ ನಾಗರಿಕರು ಉಳಿದಿದ್ದಾರೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.. ಆ.14 ರಿಂದ ಈ ವರೆಗೂ ನಡೆದ ಕಾರ್ಯಾಚರಣೆಯಲ್ಲಿ 7,000 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಪೆಂಟಗನ್ ಹೇಳಿದೆ. ಅಮೆರಿಕದ 5,200 ತುಕಡಿಗಳು ಕಾಬೂಲ್ ನಲ್ಲಿದೆ ಎಂದು ಪೆಂಟಗನ್ ಮಾಹಿತಿ ನೀಡಿದೆ. ಒಟ್ಟಾರೆ ಅಫ್ಘಾನಿಸ್ತಾನದಿಂದ ಹೊರ ನಡೆದಿರುವ ಮಂದಿಯ ಸಂಖ್ಯೆ 12,000 ಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ಇನ್ನೂ 6,000 ಮಂದಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದು ಶೀಘ್ರವೇ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿರುವ ಪೆಂಟಗನ್ , ಅಮೆರಿಕನ್ ನಾಗರಿಕರನ್ನು ಏರ್ ಲಿಫ್ಟ್ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವ ಆರ್ಮಿ ಆಪರೇಷನಲ್ ಟೆಸ್ಟ್ ಕಮಾಂಡ್ ನ ಕಮಾಂಡಿಂಗ್ ಜನರಲ್ ಮೇಜರ್ ಜನರಲ್ ಟೇಲರ್ ಮಾತನಾಡಿದ್ದು, ವಾಯು ಪ್ರದೇಶಕ್ಕೆ ಪ್ರವೇಶಿಸುವುದಕ್ಕೆ ಈಗ ಬಹು ದ್ವಾರಗಳಿವೆ. ಇದು ಸುರಕ್ಷಿತ ಮತ್ತು ಕ್ರಮಬದ್ಧವಾದ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.