ಅಫ್ಗಾನ್ ನಿಂದ 35 ಮಂದಿಯನ್ನ ಭಾರತಕ್ಕೆ ಕರೆತಂದ ಭಾರತೀಯ ವಾಯುಪಡೆ
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಭಾರತ , ಅಮೆರಿಕಾ ಸೇರಿದಂತೆ ಅನೇಕ ದೇಶಗಳು ಅಫ್ಗಾನ್ ನಿಂದ ಜನರ ಸ್ಥಳಾಂತರ ಕಾರ್ಯದಲ್ಲಿ ತೊಡಗಿವೆ.. ಈ ನಡುವೆ ಕಾಬುಲ್ ಅಂತರಾಷ್ಟ್ರೀಯ ವಿಮಾನನ ನಿಲ್ದಾಣದಲ್ಲಿ ಸರಿಣಿ ಬಾಂಬ್ ಸ್ಫೋಟಗಳು ಸಂಭವಿಸಿ ಅಮೆರಿಕಾದ 13 ಸೈನಿಕರು , ನಾಗರಿಕರೂ ಸೇರಿದಂತೆ 73 ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ..
ಅಫ್ಗಾನ್ ನಾಗರಿಕರ ಸ್ಥಳಾಂತರ ಕಾರ್ಯ ನಿಲ್ಲಿಸಿ – ಕೆನಡಾ
ಭಾರತವು ಕಾಬೂಲ್ನಿಂದ ತನ್ನ 24 ನಾಗರಿಕರು ಮತ್ತು 11 ನೇಪಾಳಿ ಪ್ರಜೆಗಳು ಸೇರಿ ಒಟ್ಟು 35 ಜನರನ್ನು ಗುರುವಾರ ತೆರವುಗೊಳಿಸಿದೆ. ಮೊದಲಿಗೆ 180 ಜನರನ್ನು ಕರೆತರಲು ಯೋಜಿಸಲಾಗಿತ್ತು. ಆದರೆ ಕಾಬೂಲ್ ನಲ್ಲಿ ತಾಲಿಬಾನ್ ವಿಧಿಸಿದ ಇತರ ನಿರ್ಬಂಧಗಳು ಮತ್ತು ವಿವಿಧ ತಪಾಸಣಾ ಕೇಂದ್ರಗಳನ್ನು ದಾಟಿ ವಿಮಾನ ನಿಲ್ದಾಣಕ್ಕೆ ತಲುಪಲು ಅನೇಕರು ವಿಫಲರಾಗಿದ್ದಾರೆ. ಆದ್ದರಿಂದ 35 ಜನರನ್ನು ಮಾತ್ರ ಸ್ಥಳಾಂತರಿಸಲು ಸಾಧ್ಯವಾಗಿದೆ ಎಂದು ತೆರವು ಕಾರ್ಯಾಚರಣೆಯ ಸಿಬ್ಬಂದಿ ತಿಳಿಸಿರುವುದಾಗಿ ವರದಿಯಾಗಿದೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 44,658 ಮಂದಿಗೆ ಸೋಂಕು
ಆಪರೇಷನ್ ದೇವಿ ಶಕ್ತಿ ಕಾರ್ಯಾಚರಣೆ ಭಾಗವಾಗಿ ಭಾರತೀಯ ವಾಯುಪಡೆ ವಿಮಾನವು ಕಾಬೂಲ್ ನಿಂದ 24 ಭಾರತೀಯರು ಮತ್ತು 11 ನೇಪಾಳಿಗರನ್ನು ಹೊತ್ತುಕೊಂಡು ದೆಹಲಿಗೆ ಸಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.








