ಕಾಬುಲ್ : ತಾಲಿಬಾನಿಗಳಿಂದ 150 ಭಾರತೀಯರ ಕಿಡ್ನಾಪ್..!
ಇಂದು ಬೆಳಿಗ್ಗೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಸುಮಾರು 150 ಭಾರತೀಯ ಪ್ರಜೆಗಳನ್ನು ತಾಲಿಬಾನ್‌ಗಳು ಕಿಡ್ನಾಪ್ ಮಾಡಿರುವುದಾಗಿ ವರದಿಯಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಅಪಹರಣಕ್ಕೆ ಒಳಗಾಗಿರುವ ಯಾರೊಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ ,ಆಗುವುದಿಲ್ಲ ಎನ್ನಲಾಗ್ತಿದೆ. ಭಾರತೀಯ ಪ್ರಜೆಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ ಭಾರತೀಯ ನಾಗರಿಕರ ಬಿಡುಗಡೆಗಾಗಿ ಬ್ಯಾಕ್-ಚಾನೆಲ್ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಭಾರತೀಯರು ಸೇರಿದಂತೆ 150 ಜನರನ್ನು ಅಪಹರಿಸಿದೆ ಎಂದು ಕಾಬೂಲ್‌ನ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಭಾರತೀಯ ವಾಯುಪಡೆಯ ಸಿ -130 ಜೆ ಸಾರಿಗೆ ವಿಮಾನವು ಕಾಬೂಲ್‌ನಿಂದ ಸುಮಾರು 85 ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾದ ಕೆಲವು ಗಂಟೆಗಳ ನಂತರ ಈ ಮಾಹಿತಿ ಹೊರಬಿದ್ದಿದೆ.
ಸರ್ಕಾರವು ಸಾಧ್ಯವಾದಷ್ಟು ಭಾರತೀಯರನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಕರೆತರಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತವು ಎಲ್ಲಾ ರಾಯಭಾರ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ ಆದರೆ ಅಂದಾಜು 1,000 ನಾಗರೀಕರು ಯುದ್ಧ ಪೀಡಿತ ದೇಶ ಅಫ್ಗಾನಿಸ್ತಾನದ ಹಲವಾರು ನಗರಗಳಲ್ಲಿ ಉಳಿದಿದ್ದಾರೆ ಮತ್ತು ಅವರ ಸ್ಥಳ ಮತ್ತು ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಅವರಲ್ಲಿ ಸುಮಾರು 200 ಸಿಖ್ಖರು ಮತ್ತು ಹಿಂದೂಗಳು ಕಾಬೂಲ್‌ನ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಈ ವಾರ ಕಾಬೂಲ್ ಮತ್ತು ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ಗಮನಿಸಲಾಗ್ತಿದ್ದು, ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವತ್ತ ಗಮನಹರಿಸಿದೆ ಎಂದು ಹೇಳಿದ್ದರು.