ಅಫ್ಘಾನಿಸ್ತಾನದಲ್ಲಿ ಭಾರತ ಸೇನಾ ಪಾತ್ರ ವಹಿಸಿದ್ರೆ ಪರಿಣಾಮ ಭೀಕರ – ತಾಲೀಬಾನ್ ಎಚ್ಚರಿಕೆ
ಅಫ್ಘಾನಿಸ್ತಾನ : ಅಫ್ಗಾನಿಸ್ತಾನ ಅಮೆರಿಕಾದಿಂದ ತನ್ನ ಸೇನೆಯನ್ನ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ಬೆನ್ನಲ್ಲೇ ಅಫ್ಗಾನ್ ನಲ್ಲಿ ಅರಾಜಕತೆಯು ತಾಂಡವವಾಡ್ತಿದೆ.. ಕುಂತಂತ್ರಿ ಚೀನಾ ಹಾಗೂ ಅದರ ಗುಲಾಮ ದೇಶ ಪಾಕಿಸ್ತಾನ ಸಹಾಯದಿಂದ ತಾಲೀಬಾನಿಗಳು ಮುಕ್ಕಾಲು ಭಾಗ ಅಫ್ಗಾನಿಸ್ತಾವನ್ನು ಅಧೀನಕ್ಕೆ ಪಡೆದುಕೊಮಡಿದ್ದು, ಜನರ ಮಾರಣ ಹೋಮ ನಡೆಸುತ್ತಿದ್ದಾರೆ.. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾ , ಅವಿವಾಹಿತ ಮಹಿಳೆಯರಿಗೆ ಉಗ್ರರನ್ನು ಮದುವೆಯಾಗುವಂತೆ ಚಿತ್ರಹಿಂಸೆ ನಿಡಲಾಗ್ತಿದೆ.. ಒಟ್ಟಾರೆಯಾಗಿ ಹೇಳೋದಾದ್ರೆ ಅಫ್ಗಾನ್ ಅಕ್ಷರಸಃ ಸ್ಮಶಾಣವಾಗಿ ಮಾರ್ಪಾಡಾಗಿದೆ..
ಈ ನಡುವೆ ಅಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ತಾಲೀಬಾನ್ ಎಚ್ಚರಿಕೆ ನೀಡಿದೆ. ಹೌದು ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು, ರಸ್ತೆ ನಿರ್ಮಾಣ ಅಭಿವೃದ್ಧಿ ವಿಚಾರಗಳಂತಹ ಮೂಲಸೌಕರ್ಯ ಯೋಜನೆಗಳಿಗೆ ಕೈಜೋಡಿಸಿರುವ ಭಾರತದ ಮಾನವೀಯ ಹಾಗೂ ಅಭಿವೃದ್ಧಿ ನೆರವನ್ನು ಸ್ವಾಗತಿಸಿರುವ ತಾಲೀಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಕತಾರ್ ಮೂಲದ ತಾಲೀಬಾನ್ ಉಗ್ರ ಸಂಘಟನೆಯ ವಕ್ತಾರ ಸುಹೈಲ್ ಶಹೀನ್ ಈ ಬಗ್ಗೆ ಮಾತನಾಡಿದ್ದು ಅಫ್ಘಾನಿಸ್ತಾನದಲ್ಲಿ ಬೇರೆ ರಾಷ್ಟ್ರಗಳ ಸೇನಾ ಇರುವಿಕೆಯ ಪರಿಸ್ಥಿತಿಯನ್ನು ನೋಡಿದ್ದಾರೆ ಎನಿಸುತ್ತದೆ. ಈ ವಿಷಯ ಅವರಿಗೆ ತೆರೆದ ಪುಸ್ತಕವಾಗಿದೆ.ಅಫ್ಗಾನ್ ಮಿಲಿಟರಿಗೆ ಸೇನಾ ನೆರವು ನೀಡಿದರೆ ತಾಲೀಬಾನಿಗಳು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಭಾರತ ಆಫ್ಘಾನಿಸ್ತಾನದ ಜನತೆಗೆ ಹಾಗೂ ರಾಷ್ಟ್ರೀಯ ಯೋಜನೆಗಳಿಗೆ ಚಾಚಿರುವ ಸಹಾಯ ಹಸ್ತ ಶ್ಲಾಘನೀಯ ಎಂದೂ ಭಾರತಕ್ಕೆ ತಾಲೀಬಾನಿಗಳು ಧನ್ಯವಾದವನ್ನೂ ತಿಳಿಸಿದ್ಧಾರೆ.
ಇತ್ತೀಚೆಗೆ ಬಿಗಿಯಾಗಿ ಬುರ್ಖಾ ಧರಿಸಿದ್ದ ಕಾರಣಕ್ಕೆ 21 ವರ್ಷದ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿದ್ದರು ಈ ಪಾಪಿ ಉಗ್ರರು.. ಅಕ್ಷರಸಹ ನರಕವಾಗಿ ಮಾರ್ಪಾಡಾಗಿಬಿಟ್ಟಿರುವ ಅಫ್ಗಾನ್ ನಲ್ಲಿ ಇದೀಗ ತಾಲೀಬಾನಿಗಳು ತಮ್ಮ ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಅವಿವಾಹಿತ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ತಾಲಿಬಾನ್ ಉಗ್ರರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ತಾಲಿಬಾನ್ ಉಗ್ರರ ದಾಳಿಯಿಂದ ಬೆದರಿದ ಸಾರ್ವಜನಿಕರು ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಕಾಬೂಲ್ ನತ್ತ ಧಾವಿಸುತ್ತಿದ್ದಾರೆ.
ಈ ನಡುವೆ ಅವಿವಾಹಿತ ಮಹಿಳೆಯರು ತಮ್ಮ ಸಂಘಟನೆ ಉಗ್ರರನ್ನು ಮಮದುವೆಯಾಗುವಂತೆ ತಾಲೀಬಾನಿಗಳು ಒತ್ತಾಯಿಸುತ್ತಾ ಮದುವೆಯಾಗುವಂತೆ ಚಿತ್ರಹಿಂಸೆ ನೀಡ್ತಿರೋದಾಗಿ ವರದಿಯಾಗಿದೆ. ಈಗಾಗಲೇ ತಾಲಿಬಾನ್ ವಶಕ್ಕೆ ಪಡೆದಿರು ಪ್ರದೇಶಗಳಲ್ಲಿ ಅವಿವಾಹಿತ ಮಹಿಳೆಯರು ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಒತ್ತಡ ಹೇರಲಾಗುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ, ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಈ ಆಪಾನೆಗಳನ್ನ ತಾಲೀಬಾನ್ ನಿರಾಕರಿಸಿದೆ..
ಅಸಲಿಗೆ ಪಾಕಿಸ್ತಾನ ಚೈನಾ ಸೇರಿಕೊಂಡು ಭಾರತದ ವಿರುದ್ಧ ಹೆಣೆಯುತ್ತಿರುವ ರಣತಂತ್ರವಿದು ಎಂದೇ ಅನೇಕ ತಜ್ಞರು ವ್ಯಾಕ್ಯಾನಿಸುತ್ತಿದ್ದಾರೆ.. ಅಮೆರಿಕಾ ಎಚ್ಚರಿಸಿರುವಂತೆ ಭಾರತದ ವಿರುದ್ಧ ಮುಂದೆ ತಾಲೀಬಾನಿಗಳು ಬಲಿಷ್ಠವಾಗಬೇಕೆಂಬ ಉದ್ದೇಶದಿಂದ್ಲೇ ಚೀನಾ ಮತ್ತದರ ಗುಲಾಮ ದೇಶ ಭಿಕಾರಿ ಪಾಕಿಸ್ತಾನ ಸಂಚು ಮಾಡ್ತಿದ್ದು, ಪರೋಕ್ಷಾವಗಿ ತಾಲೀಬಾನ್ ಗೆ ಆರ್ಥಿಕವಾಗಿ ನೆರವಾಗ್ತಿವೆ ಎನ್ನಲಾಗ್ತಿದೆ.. ಸಾಲದಕ್ಕೆ ಪಾಕ್ ತನ್ನ ದೇಶದಲ್ಲಿ ವಲಸಿಗ ತಾಲೀಬಾನಿಗಳಿಗೆ ನೆಲೆಯೂರಲು ಜಾಗ ಕೊಟ್ಟಿದೆ ಎಂದಿದೆ.. ಆದ್ರೆ ಅಸಲಿಗೆ ತಾಲೀಬಾನ್ ಉಗ್ರರಿಗೆ ನೆಲೆ ಕಲ್ಪಿಸಿಕೊಟ್ಟಿದೆ ಎಂದೇ ಹೇಳಲಾಗ್ತಿದೆ.. ಮುಂದಿನ ದಿನಗಳಲ್ಲಿ ಭಾರತಕ್ಕೆ ತಾಲೀಬಾನಿಗಳು ಕಂಟಕವಾಗಲು ಈಗ ಇಡೀ ಅಫ್ಗಾನ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಉಗ್ರರಿಗೆ ಸಪೋರ್ಟ್ ಮಾಡ್ತಿವೆ.. ಚೀನಾ ಪಾಕಿಸ್ತಾನ..
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಟ್ರೈನಿ ಎಂಜಿನಿಯರ್ ಮತ್ತು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈಗಾಗಲೇ ತಾಲೀಬಾನಿಗಳು ಅಫ್ಗಾನ್ ನ ಮೊದಲ ಪ್ರಾಂತ್ಯದ ರಾಜಧಾನಿಯನ್ನು ಕೈವಶ ಮಾಡಿಕೊಂಡಿದ್ದಾರೆ. ನಿನ್ರೋಜ್ ಪಾಂತ್ಯದ ರಾಜಧಾನಿ ಝರಾಂಜ್ ಅನ್ನು ಉಗ್ರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಾಂತ್ಯದ ಡೆಪ್ಯುಟಿ ಗವರ್ನರ್ ರೋಹ್ ಗುಲ್ ಖೈರ್ಜಾದ್ ತಿಳಿಸಿದ್ದಾರೆ. ಇರಾನ್ ಗಡಿಭಾಗದಲ್ಲಿರುವ ಈ ಪ್ರಾಂತ್ಯದಲ್ಲಿ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ಕಾಳಗ ನಡೆಯದೆ ಪ್ರಾಂತ್ಯವನ್ನು ಅವರ ವಶಕ್ಕೊಪ್ಪಿಸಲಾಯಿತು ಎಂದು ಹೇಳಿದ್ದಾರೆ. ಉಗ್ರರು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ನಗರದಲ್ಲಿ ಒಟ್ಟು50 ಸಾವಿರ ಮಂದಿ ವಾಸಿಸುತ್ತಿದ್ದಾರೆ.
ಮತ್ತೂಂದೆಡೆ, ಕಾಬೂಲ್ ನಲ್ಲಿ ಸರ್ಕಾರದ ಮಾಧ್ಯಮ ವಿಭಾಗದ ಮುಖ್ಯಸ್ಥ ದವಾಖಾನ್ ಮನಾಪಾಲ್‌ರನ್ನು ಹತ್ಯೆ ಮಾಡಲಾಗಿದೆ. ಶುಕ್ರವಾರದ ಪ್ರಾರ್ಥನೆಗಾಗಿ ಆಗಮಿಸುತ್ತಿದ್ದಂತೆಯೇ ಉಗ್ರರು ಅವರ ಮೇಲೆ ಗುಂಡು ಹಾರಿ ಸಿದ್ದಾರೆ. ಈ ಬಗ್ಗೆ ತಾಲಿಬಾನ್ ಸಂಘಟನೆಯ ವಕ್ತಾರನೇ ಈ ಅಂಶವನ್ನು ಖಚಿತಪಡಿಸಿದ್ದಾನೆ. ಆಫ್ಘಾನ್‌ನ ಪರಿಸ್ಥಿತಿ ಬಗ್ಗೆ ಕೇಂದ್ರ ಏಷ್ಯಾದ ರಾಷ್ಟ್ರಗಳಾಗಿರುವ ಕಝಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ತುರ್ಕ್ ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನದ ಸರ್ಕಾರಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಅಫ್ಘಾನಿಸ್ತಾನದ ಪಟಿಕಾ ಪ್ರಾಂತ್ಯದಲ್ಲಿ ಇರುವ ಅತ್ಯಂತ ಹಳೆಯ ಸಿಖ್ ಸಮುದಾಯದವರ ಗುರುದ್ವಾರದಲ್ಲಿ ಹಾಕಲಾಗಿದ್ದ ಧಾರ್ಮಿಕ ಧ್ವಜವನ್ನು ತಾಲಿಬಾನ್ ಉಗ್ರರು ತೆಗೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಫೋಟೋ ವೈರಲ್ ಆಗಿದೆ. ಇದನ್ನ ಭಾರತೀಯ ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದೆ. ಎಲ್ಲಾ ಸಮುದಾಯದವರನ್ನು ಒಳಗೊಂಡಂತೆ ಆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತೆ ಪರಿಸ್ಥಿತಿ ಸುಧಾರಿಸಬೇಕು ಎನ್ನುವುದೇ ಭಾರತ ಸರ್ಕಾರದ ಆಶಯ. ಸದ್ಯ ಉಂಟಾಗಿರುವ ಬೆಳವಣಿಗೆ ಖಂಡನೀಯ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ಹೇಳಿದ್ದಾರೆ. ಇಡೀ ಅಫ್ಗಾನ್ ನ ಸುಮಾರು 70 % ಭಾಗವನ್ನ ಈಗಾಗಲೇ ಅಧೀನಕ್ಕೆ ತೆಗೆದುಕೊಂಡಿರುವ ತಾಲೀಬಾನ್ ಉಗ್ರರು ಇತ್ತೀಚೆಗೆ ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ರನ್ನ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು.. ಅಲ್ಲದೇ ಇನ್ನೂ ವಿಕೃತಿ ಅಂದ್ರೆ ಖ್ಯಾತ ಹಾಸ್ಯ ಕಲಾವಿದ ಕೇವಲ ಜನರನ್ನ ನಗಿಸುತ್ತಿದ್ದರು.. ಇದು ಇಸ್ಲಾಂ ಧರ್ಮಕ್ಕೆ ವಿರೋಧ ಎಂದು ಅವರನ್ನೂ ಅಪಹರಿಸಿ ಕೊಂದಿದ್ದರು ಪಾಪಿಗಳು.. 
ಜಪಾನ್ : ಸಮುದ್ರದಲ್ಲಿ ಇಬ್ಭಾಗವಾದ ಹಡಗು – ಕಡಲಲ್ಲಿ ತೈಲ ಸೋರಿಕೆ..!
ರಾಷ್ಟ್ರಪತಿ ಪದಕ – ಪೊಲೀಸ್ ಸೇವಾ ಪದಕದ ಪಟ್ಟಿ ಬಿಡುಗಡೆ









