ಅಫ್ಗಾನ್ ನಿಂದ ಕಾಲ್ಕಿತ್ತ ಅಮೆರಿಕಾ – ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳಿಂದ ಸ್ವಾತಂತ್ರ್ಯ ಘೋಷಣೆ..!
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಅಮೆರಿಕಾಗೆ ತಾಲಿಬಾನ್ ಕೊಟ್ಟಿದ್ದ ಡೆಡ್ ಲೈನ್ ಇಂದಿಗೆ ಮುಕ್ತಾಯವಾಗಿದೆ.. ಈಗಾಗಲೇ ಅಮೆರಿಕಾ ಸಾಕಷ್ಟು ನಾಗರಿಕರು , ಅಮೆರಿಕನ್ನರನ್ನು ಅಫ್ಗಾನ್ ನಿಂದ ಸ್ಥಳಾಂತರಿಸಿದೆ.. ಅಲ್ಲದೇ ಈಗಾಗಲೇ ಅಮೆರಿಕಾದ ಕೊನೆಯ ವಿಮಾನವೂ ಅಫ್ಗಾನ್ ನಿಂದ ಹೊರಟಾಗಿದೆ.. ಹೀಗೆ ಕೊನೆಯ ವಿಮಾನ ಹೊರಡ್ತಿದ್ದಂತೆ ತಾಲಿಬಾನಿಗಳು ಆಗಸಕ್ಕೆ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 30,941 ಕೇಸ್ ಪತ್ತೆ
ಅಲ್ಲದೇ ಕಾಬುಲ್ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೂ ಅಮೆರಿಕಾ ಸೇನೆಯನ್ನು ಆಘ್ಘಾನ್ನಿಂದ ವಾಪಸ್ ಕಳುಹಿಸಿರುವುದು ಬಹಳ ಕಾಲ ನೆನಪಿನಲ್ಲಿ ಇರಲಿದೆ. ನಮ್ಮ ಈ ಗೆಲುವಿನಿಂದ ಜಾಗತೀಕ ಸಮುದಾಯ ಪಾಠ ಕಲಿಯಬೇಕಾದ ಅವಶ್ಯಕತೆ ಇದೆ ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಯಿದ್ದ ಅಭಿಪ್ರಾಯಪಟ್ಟಿದ್ದಾರೆ.
20 ವರ್ಷಗಳ ನಂತರ ನಾವು ಅಮೆರಿಕಾವನ್ನು ಸೋಲಿಸಿದ್ದೇವೆ. ಅಮೆರಿಕಾ ಸೇನೆ ಆಫ್ಘಾನ್ನಿಂದ ಸಂಪೂರ್ಣವಾಗಿ ಹೊರ ಹೋಗಿರುವುದರಿಂದ ನಾವು ಸ್ವತಂತ್ರರಾಗಿದ್ದೇವೆ, ಅದಕ್ಕಾಗಿ ನಾವು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಾಲಿಬಾನ್ ಮುಖಂಡ ಮಹಮ್ಮದ್ ಇಸ್ಲಾಂ ತಿಳಿಸಿದ್ದಾರೆ.
ಇತ್ತ ಅಮೇರಿಕಾದ ಪಡೆಗಳು 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಸೋಮವಾರ ಮಧ್ಯರಾತ್ರಿ ವೇಳೆಗೆ ಅಮೆರಿಕ ಯೋಧರನ್ನೊಳಗೊಂಡ ಕೊನೆಯ ವಿಮಾನ ಕಾಬೂಲ್ ನಿಂದ ನಿರ್ಗಮಿಸಿದ ಕೂಡಲೇ ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.








