ಅಫ್ಗಾನ್ : ಅಮೆರಿಕಾಗೆ ಎಚ್ಚರಿಕೆ ಕೊಟ್ಟ ತಾಲೀಬಾನಿಗಳು..!
ಅಫ್ಗಾನ್ : ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಮತ್ತೊಂದೆಡೆ ಅಅಮೆರಿಕಾ , ಬಾರತ ಸೇರಿ ನಾನಾ ದೇಶಗಳು ತಾಲೀಬಾನಿಗಳ ಕಫಿಮುಷ್ಠಿಯಲ್ಲಿ ಸಿಲುಕಿ ನರಕವಾಗಿರುವ ಅಫ್ಗಾನ್ ನಿಂದ ತನ್ನ ಪ್ರಜೆಗಳನ್ನ ವಾಪಸ್ ಕರೆಸಿಕೊಳ್ತಿದೆ.. ಅಂತೆಯೇ ಅಮೆರಿಕಾ ಕೂಡ.. ಆದ್ರೆ ಇದೀಗ ತಾಲಿಬಾನಿಗಳು ವಿಶ್ವದ ದೊಡ್ಡಣ್ಣ ಅಮೆರಿಕಾಗೆ ವಾರ್ನಿಂಗ್ ಕೊಟ್ಟಿದ್ದಾರೆ. ಅಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡಿರುವ ಉಗ್ರ ತಾಲಿಬಾನಿಗಳು ಅಮೆರಿಕಾಗೆ ಬೆದರಿಕೆ ಹಾಕಿದ್ದಾರೆ. ಆಗಸ್ಟ್ 31ರೊಳಗೆ ನಿಮ್ಮ ಸೈನಿಕರನ್ನು ಅಫ್ಘಾನಿಸ್ತಾನದಿಂದ ಕರೆಸಿಕೊಳ್ಳುವಂತೆ ಸಂದೇಶ ರವಾನಿಸಿದ್ದಾರೆ.
ಒಂದು ವೇಳೆ ಅಮೆರಿಕ ತನ್ನ ಸೇನೆಯನ್ನ ಹಿಂಪಡೆಯಲು ವಿಳಂಬ ನೀತಿ ತೋರಿದ್ರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ತಾಲಿಬಾನಿ ವಕ್ತಾರ ಸೋಹೆಲ್ ಶಾಹಿನ್ ಎಂಬಾತ ಕತಾರ್ ನಲ್ಲಿ ಹೇಳಿಕೆ ನೀಡಿದ್ದಾನೆ. ಅಲ್ಲದೇ ನಾವು ನಿಮಗೆ ಆಗಸ್ಟ್ 31ರವರೆಗೆ ನಿಮ್ಮ ಸೇನೆ ಕರೆಸಿಕೊಳ್ಳಲು ಸಮಯ ನೀಡಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾನೆ. ಇತ್ತ ಅಮೆರಿಕ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ನಿರ್ಧರಿಸಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ವಿದೇಶಿಗರಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ಸುಮಾರು 6 ಸಾವಿರ ಅಮೆರಿಕ ಸೈನಿಕರಿದ್ದಾರೆ.








