ಅಫ್ಗಾನ್ ನಲ್ಲಿ ಗಂಡಸರು ಇನ್ಮುಂದೆ ಗಡ್ಡ ಬೋಳಿಸುವಂತಿಲ್ಲ..!
ತಾಲಿಬಾನಿಗಳು ಸಂಪೂರ್ಣವಾಗಿ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ನಂತರ ಅವರ ಅಸಲಿ ರೂಪ ಒಂದೊಂದಾಗಿಯೇ ಬಯಲಾಗ್ತಿದೆ.. ಮಹಿಳೆಯರಿಗೆ ಗೌರವಿಸುತ್ತೇವೆ ಅವರ ಹಕ್ಕು ಕಾಪಾಡುತ್ತೇವೆ ಎಂದವರು ಮಹಿಳೆಯರ ಹಕ್ಕುಗಳನ್ನ ಒಂದೊಂದಾಗಿಯೇ ಕಿತ್ತುಕೊಂಡು ಬಂದಿದ್ದಾರೆ. ಈ ನಡುವೆ ಅಫ್ಗಾನಿಸ್ತಾನದಲ್ಲಿ ಇನ್ಮುಂದೆ ಪುರುಷರ ಗಡ್ಡ ಬೋಳಿಸದಂತೆ ತಾಲಿಬಾನಿಗಳು ಆದೇಶ ಹೊರಡಿಸಿದ್ದಾರೆ. ಇದರ ಮೊದಲ ಹಂತವಾಗಿ ಹೆಲ್ಮಾಂಡ್ ಪ್ರಾಂತ್ಯದಲ್ಲಿನ ಕಟಿಂಗ್ ಶಾಪ್ ಗಳಿಗೆ ನೋಟಿಸ್ ನೀಡಿದ್ದು ಇನ್ನೂ ಮುಂದೆ ಗಡ್ಡ ಬೋಳಿಸುವ ಅಥವಾ ಟ್ರಿಮ್ ಮಾಡುವ ಕೆಲಸ ಮಾಡದಂತೆ ತಾಕೀತು ಮಾಡಿದ್ದಾರೆ.
ಇನ್ನೂ ತಾಲಿಬಾನ್ ಪಡೆಗಳು ಮಫ್ತಿಯಲ್ಲಿ ಅಥವಾ ಗ್ರಾಹಕರ ಸೋಗಿನಲ್ಲಿ ನಿಮ್ಮ ಬಳಿ ಬರಬಹುದು. ಒಂದು ವೇಳೆ ನೀವು ಗಡ್ಡ ಬೋಳಿಸುವ ಅಥವಾ ಟ್ರಿಮ್ ಮಾಡುವ ಸೇವೆಯನ್ನು ಮುಂದುವರೆಸಿದರೆ ರೆಡ್ ಹ್ಯಾಂಡ್ ಆಗಿ ನಿಮ್ಮನ್ನ ಹಿಡಿದು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನೂ ಗಡ್ಡ ಬೋಳಿಸುವುದು ಮತ್ತು ಟ್ರಿಮ್ ಮಾಡುವುದು ಇಸ್ಲಾಂಗೆ ವಿರುದ್ಧವಾಗಿದೆ. ಅಮೆರಿಕಾದ ಶೈಲಿಯ ಅನುಕರಣೆಯನ್ನು ನಿಲ್ಲಿಸಿ, ಇನ್ನೂ ಮುಂದೆ ಯಾರಿಗೂ ಗಡ್ಡ ಟ್ರಿಮ್ ಮಾಡಬೇಡಿ ಎಂದು ತಾಲಿಬಾನ್ ಪಡೆಗಳು ಸೂಚಿಸಿವೆ ಎನ್ನಲಾಗಿದೆ.