ಪಂಜಶೀರ್ ವಶಕ್ಕೆ ಪಡೆದುಕೊಂಡಾಗಿದೆ ಎಂದ ತಾಲಿಬಾನ್..!
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ.
ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಆದ್ರೆ ಈ ನರರೂಪಿ ತಾಲಿರಾಕ್ಷಸರನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರ ಪಂಜ ಶೀರ್ ನ ವೀರರು.
ತಾಲಿಬಾನಿಗಳ ಹುಟ್ಟಡಗಿಸಿದ್ದ ಪಂಜ್ ಶೀರ್ ವೀರರು ಸುಮಾರು 300 ಕ್ಕೂ ಹೆಚ್ಚು ತಾಲಿಬಾನಿಗಳ ಬಲಿ ಪಡೆದಿದ್ದರು..
ಸುಧೀರ್ಘವಾದ ಹೋರಾಟದ ನಂತರ ಸಾವು ನೋವುಗಳ ನಂತರ ಇದೀಗ ಪಂಜ್ ಶೀರ್ ನಮ್ಮ ಕೈವಶವಾಗಿದೆ ಎಂದು ಘೋಷಣೆ ಮಾಡಿದೆ ತಾಲಿಬಾನ್.
ಪಂಜಶಿರ್ ಪ್ರಾಂತ್ಯದ ಹೋರಾಟಗಾರರ ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಪಡೆ ನೀಡಿದ್ದ ಕದನ ವಿರಾಮ ಕರೆಯನ್ನು ತಾಲಿಬಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಪಂಜಶಿರ್ ನಮ್ಮ ನಿಯಂತ್ರಣಕ್ಕೆ ಬಂದಿದೆ, ಪಂಜಶಿರ್ ಪ್ರಾಂತ್ಯದ ಗವರ್ನರ್ ಕಚೇರಿ ಮೇಲೆ ತಾಲಿಬಾನ್ ಧ್ವಜ ಹಾರಿಸಿದ್ದಾಗಿ ವರದಿಯಾಗಿದೆ.
ಆದರೆ ತಾಲಿಬಾನಿಗಳ ಹೇಳಿಕೆಯನ್ನು ಸ್ಥಳೀಯ ಹೋರಾಟ ಪಡೆಗಳು ಅಲ್ಲಗಳೆದಿದ್ದವು.
ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಾಲೇಹ್ ಆಪ್ತವಲಯದ ಪ್ರತಿನಿಧಿಯೊಬ್ಬರು ಮಾತನಾಡಿ, ಪಂಜಶಿರ್ ನಮ್ಮ ವಶದಲ್ಲೇ ಇದೆ. ಇಲ್ಲಿನ ಗುಡ್ಡಗಾಡುಗಳೆಲ್ಲ ನಮ್ಮ ಜನರೇ ಇದ್ದಾರೆ.
ಆದರೆ ತಾಲಿಬಾನ್ ಪಾಕಿಸ್ತಾನದ ಡ್ರೋನ್ ನೆರವಿನಿಂದ ಬಾಂಬ್ ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾಗಿ ವರದಿಯಾಗಿತ್ತು.
ಆದ್ರೆ ಪಂಜ್ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಮತ್ತೊಮ್ಮೆ ಪ್ರತಿಪಾದಿಸಿದೆ.
ನಿನ್ನೆ ರಾತ್ರಿ ಪಂಜ್ಶೀರ್ ಪ್ರಾಂತ್ಯದ ಸಮೀಪಕ್ಕೆ ಆಗಮಿಸಿದ್ದ ತಾಲಿಬಾಲಿಗಳು ಎಂಟು ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಿದ್ದು, ಇಂದು ಮುಂಜಾನೆ ವೇಳೆಗೆ ಇಡೀ ಪಂಜ್ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಲ್ಲಿಯವರೆಗೆ ಈ ಪ್ರಾಂತ್ಯವು ಆಪ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಪಡೆಯ ನಿಯಂತ್ರಣದಲ್ಲಿತ್ತು.
ತಾಲಿಬಾನ್ ಹಾಗೂ ಎನ್ ಆರ್ ಎಫ್ ಎ ನಡುವೆ ಹಲವು ದಿನಗಳಿಂದ ಈ ಪ್ರದೇಶಕ್ಕಾಗಿ ಕದನ ನಡೆಯುತ್ತಿತ್ತು.
ಸದ್ಯ ಪಂಜ್ ಶಿರ್ ವಶಪಡಿಸಿಕೊಳ್ಳುವುದರ ಮೂಲಕ ತಾಲಿಬಾನ್, ಆಪ್ಘಾನಿಸ್ತಾವನ್ನು ಸಂಪೂರ್ಣವಾಗಿ ತನ್ನ ವಶ ಮಾಡಿಕೊಂಡಿದೆ.








