ಇಸ್ಲಾಂ ವಿರುದ್ಧದ ಪ್ರತಿಯೊಂದು ವಸ್ತುವನ್ನು / ವಿಚಾರವನ್ನ ಶಿಕ್ಷಣದಿಂದ ತೆಗೆದುಹಾಕಬೇಕು – ತಾಲಿಬಾನ್
ಇಸ್ಲಾಂ ವಿರುದ್ಧದ ಪ್ರತಿಯೊಂದು ವಸ್ತುವನ್ನು ಅಥವ ವಿಚಾರವನ್ನ ಶಿಕ್ಷಣದಿಂದ ತೆಗೆದುಹಾಕಬೇಕೆಂದು ತಾಲಿಬಾನ್ ಹೊಸ ಆದೇಶವನ್ನು ಹೊರಡಿಸಿದೆ. ತಾಲಿಬಾನ್ ಅಫ್ಘಾನ್ ಶಿಕ್ಷಣ ವ್ಯವಸ್ಥೆಯಲ್ಲಿ ಇಸ್ಲಾಮ್ ಗೆ ವಿರುದ್ಧವಾಗಿರುವ ಪ್ರತಿ ವಸ್ತು ಅಥವ ವಿಚಾರವನ್ನ ತೆಗೆದುಹಾಕಲು ಯೋಜಿಸುತ್ತಿದೆ. ಅಲ್ಲದೇ ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಾಕಿ ಹಕ್ಕಾನಿ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮಿಕ್ ತತ್ವಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಅಲ್ಲದೇ ಶಿಕ್ಷಣ ವ್ಯವಸ್ಥೆಯಲ್ಲಿ ಇಸ್ಲಾಂ ವಿರುದ್ಧದ ಪ್ರತಿಯೊಂದು ಐಟಂ ಅನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಅಫ್ಗಾನ್ ನಲ್ಲಿ ಭಯೋತ್ಪಾದಕ ಗುಂಪು ( ತಾಲಿಬಾನಿಗಳು) ಉತ್ತಮ ಆಡಳಿತದ ಭರವಸೆ ನೀಡಿದ್ರೂ ಕೂಡ ಅವರ ನಡೆ ನುಡಿ ನಡುವೆ ಅಂತರ ಎದ್ದು ಕಾಣ್ತಿದೆ.
ತಾಲಿಬಾನ್ ತನ್ನ ಹಿಂದಿನ ಆಡಳಿತದಲ್ಲಿ ಸಂಗೀತವನ್ನು ಇಸ್ಲಾಮಿಕ್ ವಿರೋಧಿ ಎಂದು ಹೇಳಿ ಅದನ್ನ ನಿಷೇಧಿಸಿತ್ತು.. ಸಾಲದಕ್ಕೆ ಮಹಿಳೆಯರ ಹಕ್ಕುಗಳನ್ನ ಸಂಪೂರ್ಣವಾಗಿ ಮೊಟೊಕುಗೊಳಿಸಿತ್ತು. ಈಗಲೂ ಅದೇ ಪ್ರಯತ್ನದಲ್ಲಿದೆ. ಮಹಿಳೆಯರ ಕೆಲಸ ಮತ್ತು ಶಿಕ್ಷಣದ ಹಕ್ಕುಗಳನ್ನು ಹಿಂದಿನ ಆಳ್ವಿಕೆಯಲ್ಲಿ ನಿಷೇಧಿಸಿತ್ತು.
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನರರಾಕ್ಷಸರಿಂದಾಗಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಮಹಿಳೆಯರೇ.. ನಾವು ಬದಲಾಗಿದ್ದೇವೆ, ಮಹಿಳೆಯರ ಹಕ್ಕನ್ನ ಗೌರವಿಸುತ್ತೇವೆ ಎಂದು ಹೇಳಿಕೊಂಡಿದ್ದ ತಾಲಿಬಾನಿಗಳು ಒಂದೊಂದಾಗೇ ಮಹಿಳೆಯರ ಹಕ್ಕನ್ನ ಕಸಿಯುತ್ತಿದ್ದಾರೆ.. ಮೊದಲಿಗೆ ಸರ್ಕಾರಿ ಮಾಧ್ಯಮಗಳಲ್ಲಿ ಮಹಿಳೆಯರನ್ನ ಕೆಸಲದಿಂದ ಕಿತ್ತೊಗೆದ ಬಗ್ಗೆ ಸುದ್ದಿಯಾಯ್ತು. ನಂತರ ಕಂದಹಾರ್ ಪ್ರಾಂತ್ಯದಲ್ಲಿ ಸುದ್ದಿ ವಾಹಿನಿಗಳು , ಸಂಗೀತವಿರಲಿ ಯಾವುದ್ರಲ್ಲೂ ಮಹಿಳೆಯರ ಧ್ವನಿ ಕೇಳಬಾರದೆಂದು ಆದೇಶ ನೀಡಿದ್ರು..
ತಾಲಿಬಾನ್ ನಲ್ಲಿ ಮಹಿಳೆಯರಿಗೆ ನರಕ – ಟಿವಿ – ರೇಡಿಯೋಗಳಲ್ಲೂ ಮಹಿಳೆಯರ ಧ್ವನಿ ಕೇಳುವಂತಿಲ್ಲ..!
ಅಲ್ಲದೇ ಮತ್ತೊಂದು ಹೊಸ ಆದೇಶ ಹೊರಡಿಸಿದ್ದಾರೆ.. ಹೌದು ಈ ಆದೇಶದಂತೆ ಹುಡುಗರು , ಹುಡುಗಿಯರು ಶಾಲೆಗಳಲ್ಲಿ ಒಟ್ಟಾಗಿ ಓದುವಂತಿಲ್ಲ.. ವಿದ್ಯಾರ್ಥಿನಿಯರಿಗೆ ಪುರುಷ ಶಿಕ್ಷಕರು ಪಾಠ ಮಾಡುವ ಹಾಗಿಲ್ಲ. ಕಡ್ಡಾಯವಾಗಿ ಮಹಿಳಾ ಶಿಕ್ಷಕಿಯರೇ ಪಾಠ ಮಾಡಬೇಕಿದೆ.








