ಅಫ್ಘಾನಿಸ್ತಾನ : ಪತ್ರಕರ್ತನ ಸಂಬಂಧಿಯ ಕೊಂದ ತಾಲಿಬಾನಿಗಳು
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಾಕ್ಷಸರು ಡಾಯ್ಚ ವೆಲ್ಲೆ ಪತ್ರಕರ್ತನಿಗಾಗಿ ಮನೆ ಮನೆಗೂ ತೆರಳಿ ಹುಡುಕಾಟ ನಡೆಸ್ತಾಯಿದ್ದಾರೆ.. ಈ ನಡುವೆ ಪತ್ರಕರ್ತನ ಸಂಬಂಧಿಯನ್ನ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಈಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗಾಗಿ ಉಗ್ರರು ಮನೆ ಮನೆಗೆ ತೆರಳಿ ಶೋಧ ನಡೆಸುತ್ತಿದ್ದಾರೆ ಎಂದು ಡಿಡಬ್ಲ್ಯೂ ಗುರುವಾರ ಹೇಳಿದೆ. ಓರ್ವ ಸಂಬಂಧಿ ಸಾವನಪ್ಪಿದ್ರೆ ಮತ್ತೋರ್ವ ಸಂಬಂಧಿ ಗಂಭೀರವಾಗಿ ಗಾಯಗೊಂಡಿದ್ದಾಗಿ ತಿಳಿದುಬಂದಿದೆ. ಉಳಿದ ಕೆಲವರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರಿಗಾಗಿಯೂ ಹುಡುಕಾಟ ನಡೆಯುತ್ತಿದೆ. ಡಿಡಬ್ಲ್ಯೂ ಡೈರೆಕ್ಟರ್ ಜನರಲ್ ಪೀಟರ್ ಲಿಂಬರ್ಗ್ ಅವರು ಈ ಹತ್ಯೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಮಾಧ್ಯಮ ಕಾರ್ಯಕರ್ತರು ಮತ್ತು ಅಫ್ಘಾನಿಸ್ತಾನದಲ್ಲಿರುವ ಅವರ ಕುಟುಂಬಗಳಿಗೆ ಅಪಾಯವಿರುವುದನ್ನ ಿದು ತೋರಿಸುತ್ತದೆ ಎಂದೂ ಕೂಡ ತಿಳಿಸಿದ್ದಾರೆ.
ಕಾಬೂಲ್ನಿಂದ 5 ದಿನಗಳಲ್ಲಿ 7000 ಜನರ ಸ್ಥಳಾಂತರಿಸಿದ ಅಮೆರಿಕಾ ಸೇನೆ
ನಿನ್ನೆ ತಾಲಿಬಾನ್ ನಮ್ಮ ಸಂಪಾದಕರೊಬ್ಬರ ಹತ್ತಿರದ ಸಂಬಂಧಿಯನ್ನು ಕೊಂದಿದ್ದು ಅಫ್ಘಾನಿಸ್ತಾನದಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ ಎಂದು ಪ್ರತಿಪಾದಿಸಿದ್ದಾರೆ. ತಾಲಿಬಾನ್ ಈಗಾಗಲೇ ಪತ್ರಕರ್ತರಿಗಾಗಿ ಕಾಬೂಲ್ ಮತ್ತು ಪ್ರಾಂತ್ಯಗಳಲ್ಲಿ ಸಂಘಟಿತ ಹುಡುಕಾಟಗಳನ್ನು ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ತಾಲಿಬಾನ್ ಕನಿಷ್ಠ ಮೂರು ಇತರ ಡಿಡಬ್ಲ್ಯೂ ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದ್ದಾರೆ.








