ರಾಷ್ಟ್ರ ಧ್ವಜ ಪ್ರದರ್ಶಿಸಿದ ಅಫ್ಗಾನಿಸ್ತಾನಿ ಪ್ರಜೆಗಳನ್ನ ಕೊಂದ ತಾಲೀಬಾನಿಗಳು
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ.. ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ..
ಈ ನಡುವೆ ಅಫ್ಗಾನ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ತಾಲೀಬಾನಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಮೂವರನ್ನ ಉಗ್ರರು ಗುಂಡಿಟ್ಟು ಕೊಲೆ ಮಾಡಿದ್ದಾರೆ.. ಈ ಘಟನೆ ಜಲಾಲಾಬಾದಿನಲ್ಲಿ ನಡೆದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಸಾರ್ವಜನಿಕರು ಅಲ್ಲಿಲ್ಲಿ ಉಗ್ರ ಹೋರಾಟ ನಡೆಸುತ್ತಿದ್ದಾರೆ.
20 ವರ್ಷಗಳ ಬಳಿಕ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದ್ದು, ಇತಿಹಾಸ ಕಂಡರಿಯದ ದುರಂತಗಳಿಗೆ ಅಲ್ಲಿನ ಜನರು ಸಾಕ್ಷಿಯಾಗುತ್ತಿದ್ದಾರೆ. ಅಲ್ಲಿನ ಜನರು ಪ್ರಾಣ ಭಯದಿಂದ ಬೇರೆ ದೇಶಗಳತ್ತ ಓಡುತ್ತಿದ್ದಾರೆ. ಈ ಮಧ್ಯೆ ಅಫ್ಘಾನ್ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಇದೀಗ ಸ್ವದೇಶಕ್ಕೆ ಕರೆತರಲಾಗಿದೆ. ಕಾಬೂಲ್‍ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 120 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ತನ್ನ ಸಿ -17 ವಿಮಾನದಲ್ಲಿ ದೇಶಕ್ಕೆ ಕರೆತಂದಿದೆ. ಬುಕ್ ನಲ್ಲಿ ತಾಲಿಬಾನ್ ಬ್ಯಾನ್ ಆಗಿದೆ. ತಾಲಿಬಾನ್ ಅನ್ನು ಉಗ್ರ ಸಂಘಟನೆಯಾಗಿ ಗುರುತಿಸಿ, ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ಮಾಹಿತಿ ಸಮಾಚಾರವನ್ನು ಬ್ಯಾನ್ ಮಾಡಲಾಗಿದೆ.