Afganisthan : ಕೊಲೆ ಆರೋಪಿಯನ್ನ ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್..!!
ಅಫ್ಘಾನಿಸ್ತಾನದ ಚಿತ್ರಣ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರದಿಂದ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ..
ಅದ್ರಲ್ಲೂ ಮಹಿಳೆಯರ ಸ್ವಾತಂತ್ರ್ಯವನ್ನ ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ ಅಂದ್ರೂ ತಪ್ಪಾಗೋದಿಲ್ಲ..
ಇದೀಗ ಕೊಲೆ ಆರೋಪಿಯನ್ನು ತಾಲಿಬಾನ್ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ.
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಲೆ ಓರ್ವ ಆರೋಪಿಯನ್ನು ಗಲ್ಲಿಗೇರಿಸಲಾಗಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಬಗ್ಗೆ ಮಾತನಾಡಿರೋದಾಗಿ ವರದಿಯಾಗಿದೆ.. ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ 2017 ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಇರಿದು ಕೊಂದ ಆರೋಪವನ್ನು ಹೊತ್ತಿದ್ದ..
ಈ ಪ್ರಕರಣವನ್ನು ಮೂರು ನ್ಯಾಯಾಲಯಗಳು ತನಿಖೆ ಮಾಡಿವೆ. ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ತಂಡದ ಅತ್ಯುನ್ನತ ಆಧ್ಯಾತ್ಮಿಕ ನಾಯಕರಿಂದ ಶಿಕ್ಷೆಯನ್ನು ಅಧಿಕೃತಗೊಳಿಸಲಾಗಿದೆ ಎಂದು ಮುಜಾಹಿದ್ ಹೇಳಿದ್ದು ,
10ಕ್ಕೂ ಹೆಚ್ಚು ಹಿರಿಯ ತಾಲಿಬಾನ್ ಅಧಿಕಾರಿಗಳು ಮರಣದಂಡನೆ ಶಿಕ್ಷೆ ಸಂದರ್ಭದಲ್ಲಿ ಹಾಜರಾಗಿದ್ದರೆಂದು ವರದಿಯಾಗಿದೆ..
ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಮತ್ತು ಹಾಲಿ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್, ದೇಶದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ವಿದೇಶಾಂಗ ಮಂತ್ರಿ ಮತ್ತು ಹಾಲಿ ಶಿಕ್ಷಣ ಸಚಿವರು ಇದ್ದರು.
ತಾಲಿಬಾನ್ ನ ಆಧ್ಯಾತ್ಮಿಕ ನಾಯಕ, ನ್ಯಾಯಾಧೀಶರನ್ನು ಭೇಟಿಯಾಗಿ ಷರಿಯಾ ಕಾನೂನಿಗೆ ಅನುಗುಣವಾಗಿ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದರು.
ಈಗ ಯಾವ ರೀತಿ ಗಲ್ಲಿಗೇರಿಸಲಾಗಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.. 1996-2001ರ ಸಂದರ್ಭದಲ್ಲಿ ತಾಲಿಬಾನ್ ಆಡಳಿತದಲ್ಲಿ ಕಲ್ಲೆಸೆತದ ಮೂಲಕ ಮರಣದಂಡನೆ ನೀಡಲಾಗಿತ್ತು.








