ತಾಲಿಬಾನಿಗಳ ಕೈ ಸೆರೆಯಲ್ಲಿರುವ ಅಫ್ಗಾನಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.. ಅಫ್ಗಾನಿಸ್ತಾನದಲ್ಲಿ ಭಾರೀ ಮಳೆಯಾಗ್ತಿದ್ದು ಹಿಮವೂ ಸಹ ಭಾರೀ ಪ್ರಮಾಣದಲ್ಲೇ ಸುರಿಯುತ್ತಿರೋದ್ರಿಂದ ದೇಶದ ಬಹುತೇಕ ಕಡೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
‘ಫ್ರೀ ಆಫ್ ಅಫ್ಗಾನಿಸ್ತಾನ್’ ರೇಡಿಯೊದೊಂದಿಗೆ ಮಾತನಾಡಿರುವ ವಿಪತ್ತು ನಿರ್ವಹಣಾ ಸಚಿವಾಲಯದ ಅಧಿಕಾರಿಯೊಬ್ಬರು, ವಿಪತ್ತು ಎದುರಾಗಿರುವ ಪ್ರಾಂತ್ಯಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂದು ಹೇಳಿರುವುದಾಗಿ ಸುದ್ದಿ ಮಾಧ್ಯಮ ‘ಖಾಮಾ ಪ್ರೆಸ್’ ವರದಿ ಮಾಡಿದೆ.
ಇನ್ನೂ ಭಾರೀ ಹಿಮಪಾತದಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ಅದನ್ನು ತೆರವುಗೊಳಿಸಲು ತುರ್ತು ಕಾರ್ಯಾಚರಣೆ ಕೈಗೊಳ್ಳಲು ಕ್ರಮ ಕೈಗೊಂಡಿರುವುದಾಗಿಯೂ ವರದಿಯಾಗಿದೆ. ಅಫ್ಗಾನಿಸ್ತಾನದ 34 ಪ್ರಾಂತ್ಯಗಳಲ್ಲಿ 32ರಲ್ಲಿ ಹಿಮ ಮತ್ತು ಮಳೆ ಸುರಿಯುತ್ತಿದೆ. ಹೀಗಾಗಿ ರಸ್ತೆಗಳು ಮುಚ್ಚಿ ಹೋಗಿದ್ದು ಪ್ರವಾಹ ಉಂಟಾಗಿದೆ.








