ಅಫ್ಗಾನಿಸ್ತಾನವನ್ನು ಸ್ಮಷಾಣ ಮಾಡಿದ ತಾಲೀಬಾನಿಗಳನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಸಂಸದನ ವಿರುದ್ಧ ಕೇಸ್..!
ಉತ್ತರಪ್ರದೇಶ : ಇಡೀ ಅಫ್ಗಾನ್ ಅನ್ನೇ ನರಕ ಸ್ಮಷಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಆದ್ರೆ ಇದೀಗ ನೇರವಾಗಿ ತಾಲೀಬಾನಿಗಳ ಕಾರ್ಯಕ್ಕೆ ಭಲೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನಮ್ಮ ಭಾರತದ ಸಂಸದ ಮಹಾಶಯರು.. ಹೌದು ತಾಲೀಬಾನಿಗಳನ್ನ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿ ಅವರ ಕಾರ್ಯವನ್ನ ಹಾಡಿಹೊಳಿರುವ ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರೆಹಮಾನ್ ಬರ್ಕ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.
ಸಂಭಲ್ ಪೊಲೀಸ್ ಠಾಣೆಯಲ್ಲಿ ಸಂಸದ ಹಾಗೂ ಇತರ ಇಬ್ಬರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.. ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಕ್ಕಾಗಿ ಸಂಸದರ ವಿರುದ್ಧ ದೂರು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನೂ ಇಂತಹ ಹೇಳಿಕೆಗಳು ದೇಶದ್ರೋಹಕ್ಕೆ ಅರ್ಹವಾಗಿವೆ. ಹಾಗಾಗಿ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ), 153 ಎ, 295 ಅಡಿಯಲ್ಲಿ ಸಂಸದರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇತರ ಇಬ್ಬರು ವ್ಯಕ್ತಿಗಳಾದ ಫೈಜಾನ್ ಚೌಧರಿ ಮತ್ತು ಮೊಹಮ್ಮದ್ ಮುಕೀಮ್ ಅವರು ಫೇಸ್ ಬುಕ್ ವೀಡಿಯೋದಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಅವರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ ಎಂದು ಕೂಡ ತಿಳಿಸಿದ್ದಾರೆ. ಸಂಸದ ಹಾಗೂ ಇತರ ಇಬ್ಬರ ವಿರುದ್ಧ ಸ್ಥಳೀಯ ಬಿಜೆಪಿ ನಾಯಕ ರಾಜೇಶ್ ಸಿಂಘಾಲ್ ಅವರು ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.