ಅಫ್ಗಾನಿಸ್ತಾನ : ಅಫ್ಗಾನ್ ನಲ್ಲಿ ಪ್ರಸ್ತುತ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಸರ್ಕಾರ , ತಾಲಿಬಾನ್ ಸೇನೆಗೆ ಆತ್ಮಹತ್ಯಾ ಬಾಂಬರ್ ಗಳನ್ನ ಅಧಿಕೃತವಾಗಿ ನೇಮಕ ಮಾಡಿಕೊಳ್ಳುತ್ತಿದೆ..
ಅಧಿಕಾರಕ್ಕೆ ಬರುವ ಮೊದಲು ತಾಲಿಬಾನ್ 20 ವರ್ಷಗಳ ಯುದ್ಧದಲ್ಲಿ ಯುಎಸ್ ಮತ್ತು ಅಫ್ಘಾನ್ ಪಡೆಗಳ ಮೇಲೆ ದಾಳಿ ಮಾಡಲು ಆತ್ಮಹತ್ಯಾ ಬಾಂಬರ್ ಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿತ್ತು.
ಈಗ ಗುಂಪು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಅಪ್ಘಾನಿಸ್ತಾನವನ್ನು ರಕ್ಷಿಸಲು ದೇಶಾದ್ಯಂತ ಆತ್ಮಹತ್ಯಾ ಬಾಂಬರ್ ಗಳನ್ನು ನೇಮಿಸಲು ತಾಲಿಬಾನ್ ಸರ್ಕಾರ ಮುಂದಾಗಿದೆ ಎಂದಿದ್ದಾರೆ ತಾಲಿಬಾನ್ ಉಪ ವಕ್ತಾರ ಬಿಲಾಲ್ ಕರಿಮಿ..
ಅಲ್ಲದೇ ಗಡಿಯಲ್ಲಿ ಆತ್ಮಹತ್ಯಾ ಬಾಂಬರ್ ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ರಕ್ಷಣೆಯನ್ನು ಹೆಚ್ಚಿಸಲು ಬಲವಾದ ಮತ್ತು ಸಂಘಟಿತ ಸೈನ್ಯಕ್ಕೆ ಸಹಕಾರಿಯಾಗಿದೆ. ಸುಮಾರು 1,50,000 ಯೋಧರನ್ನು ಸೇನೆಗೆ ಆಹ್ವಾನಿಸಲಾಗುವುದು ಎಂದು ಕರಿಮಿ ಮಾಹಿತಿ ನೀಡಿದ್ದಾರೆ.








