ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ.. ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ..
ಈ ನಡುವೆ ಆಫ್ಘಾನಿಸ್ಥಾನ ನಿರಾಶ್ರಿತರಿಗೆ ಬ್ರಿಟನ್ ನಲ್ಲಿ ಪುನರ್ವಸತಿ ಘೋಷಿಸಲಾಗಿದೆ. ಮೊದಲ ವರ್ಷದಲ್ಲಿ 5000 ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಿದ್ದು, ದೀರ್ಘಕಾಲದಲ್ಲಿ 20 ಸಾವಿರ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ನಿಂದ ಪಲಾಯನ ಮಾಡುವ ಆಫ್ಘನ್ನರಿಗೆ ಬ್ರಿಟನ್ ಪುನರ್ವಸತಿ ಯೋಜನೆಯನ್ನು ಘೋಷಿಸಿದೆ, ರಾಯಭಾರ ಸಿಬ್ಬಂದಿ ಸೇರಿದಂತೆ ಯುಕೆ ಪ್ರಜೆಗಳನ್ನು ವಾಪಸ್ ಕರೆತರಲು ಸುಮಾರು 900 ಬ್ರಿಟಿಷ್ ಸೈನಿಕರನ್ನು ಅಫ್ಘಾನ್ ರಾಜಧಾನಿಗೆ ಕಳುಹಿಸಲಾಗಿದೆ.
ಅಫ್ಘಾನ್ ಮಹಿಳೆಯರು, ಮಕ್ಕಳು ಮತ್ತು ಬೆದರಿಕೆ, ಕಿರುಕುಳಗಳನ್ನು ಎದುರಿಸುತ್ತಿರುವವರು, ಅತ್ಯಂತ ಅಪಾಯದಲ್ಲಿರುವವರಿಗೆ ಆದ್ಯತೆ ನೀಡಲಾಗುವುದು, ಅವರಿಗೆ ಬ್ರಿಟನ್‌ನಲ್ಲಿ ಅನಿರ್ದಿಷ್ಟವಾಗಿ ಉಳಿಯುವ ಅವಕಾಶವನ್ನು ನೀಡಲಾಗುವುದು ಎಂದು ಲಂಡನ್ ಹೇಳಿದೆ.
20 ವರ್ಷಗಳ ಬಳಿಕ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದ್ದು, ಇತಿಹಾಸ ಕಂಡರಿಯದ ದುರಂತಗಳಿಗೆ ಅಲ್ಲಿನ ಜನರು ಸಾಕ್ಷಿಯಾಗುತ್ತಿದ್ದಾರೆ. ಅಲ್ಲಿನ ಜನರು ಪ್ರಾಣ ಭಯದಿಂದ ಬೇರೆ ದೇಶಗಳತ್ತ ಓಡುತ್ತಿದ್ದಾರೆ. ಈ ಮಧ್ಯೆ ಅಫ್ಘಾನ್ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಇದೀಗ ಸ್ವದೇಶಕ್ಕೆ ಕರೆತರಲಾಗಿದೆ. ಕಾಬೂಲ್‍ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 120 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ತನ್ನ ಸಿ -17 ವಿಮಾನದಲ್ಲಿ ದೇಶಕ್ಕೆ ಕರೆತಂದಿದೆ. ಬುಕ್ ನಲ್ಲಿ ತಾಲಿಬಾನ್ ಬ್ಯಾನ್ ಆಗಿದೆ. ತಾಲಿಬಾನ್ ಅನ್ನು ಉಗ್ರ ಸಂಘಟನೆಯಾಗಿ ಗುರುತಿಸಿ, ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ಮಾಹಿತಿ ಸಮಾಚಾರವನ್ನು ಬ್ಯಾನ್ ಮಾಡಲಾಗಿದೆ.
ಈ ಮಧ್ಯೆ ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದ ತಾಲಿಬಾನ್ ಇದೀಗ ಮಹತ್ವದ ಪ್ರಕಟಣೆಯೊಂದು ಘೋಷಣೆ ಮಾಡಿದ್ದು, ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಮರಳುವಂತೆ ಮನವಿ ಮಾಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೆಲವು ವಿದ್ಯಾಮಾನಗಳ ಬಗ್ಗೆ ಕ್ಷಮೆ ಇರಲಿ, ಎಲ್ಲರನ್ನೂ ಕ್ಷಮೆ ಕೇಳುತ್ತೇವೆ. ನೀವು ನಿಮ್ಮ ದಿನನಿತ್ಯದ ಜೀವನವನ್ನು ಪ್ರಾರಂಭಿಸಬೇಕು. ಪ್ರತಿದಿನದ ಜೀವನದಂತೆ ಮತ್ತೆ ನಿಮ್ಮ ಜೀವನ ಪ್ರಾರಂಭ ಮಾಡಿ, ಸರ್ಕಾರಿ ಉದ್ಯೋಗಿಗಳು ಮತ್ತೆ ತಮ್ಮ ಕೆಲಸಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದೆ.