ತಾಲಿಬಾನ್ ರಾಕ್ಷಸರಿಂದ ಜೀವ ಭಯ – ಪಾಕ್ ನಲ್ಲಿ ಆಶ್ರಯ ಪಡೆದ ಅಫ್ಗಾನ್ ಫುಟ್ ಬಾಲ್ ಆಟಗಾರ್ತಿಯರು
ಅಫ್ಗಾನ್ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ನರರಾಕ್ಷಸ ತಾಲಿಬಾನಿಗಳು ಅಲ್ಲಿನ ಮಹಿಳೆಯರಿಂದ ಎಲ್ಲಾ ರೀತಿಯಾದ ಹಹಕ್ಕುಗಳನ್ನ ಕಸಿಯುತ್ತಿದ್ದಾರೆ. ಮಹಿಳೆಯರಿಗೆ ಚಿತ್ರಹಿಂಸೆ ನೀಡ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಂದಲೂ ಮಹಿಳೆಯರನ್ನ ದೂರ ಇಡುತ್ತಿರುವ ಉಗ್ರರು ಮಹಿಳೆಯರ ಕೆಲಸ ಕೇವಲ ಮಕ್ಕಳನ್ನ ಹೆರುವುದು ಅಷ್ಟೇ ಎಂದು ಹೇಳಿಕೆಗಳನ್ನ ನೀಡುತ್ತಾ ತಿರುಗಾಡ್ತಿದ್ದಾರೆ. ಈ ನಡುವೆ ಮಹಿಳೆಯರು ತಾಲಿಬಾನಿಗಳ ವಿರುದ್ಧ ತಿರುಗಿಬಿದ್ದಿದ್ದ ಸಾಮಾಜಿಕ ಜಾಲತಾಣಗಳ್ಲೂ ಅಭಿಯಾನವನ್ನೇ ಆರಂಭಿಸಿದ್ದಾರೆ..
ಸೆಲೆಬ್ರಿಟಿಗಳು , ಕ್ರೀಡಾಪಟುಗಳು, ರಾಜಕಾರಣಿಗಳು ಇನ್ನೂ ಅನೇಕರು ದೇಶದಿಂದ ಫಲಾಯನ ಮಾಡಿದ್ದಾರೆ. ಇದೀಗ ತಾಲಿಬಾನಿಗಳಿಂದ ಜೀವ ಭಯ ಅನುಭವಿಸುತ್ತಿರುವ ಅಫ್ಗಾನ್ ನ 32 ಮಂದಿ ಫುಟ್ ಬಾಲ್ ಆಟಗಾರ್ತಿಯರು ದೇಶ ತೊರೆದು ಪಾಕ್ ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 32 ಮಂದಿ ಫುಟ್ಬಾಲ್ ಆಟಗಾರ್ತಿಯರೂ ಸಹ ತಮ್ಮ ಕುಟುಂಬ ಸಮೇತ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಮಾನವೀಯ ನೆಲೆಯಲ್ಲಿ ಪಾಕ್ ಸರ್ಕಾರ ಅವರಿಗೆ ತುರ್ತು ವೀಸಾಗಳನ್ನು ನೀಡಿತ್ತು ಎಂದು ಹೇಳಲಾಗಿದೆ.
ರಾಷ್ಟ್ರೀಯ ಜೂನಿಯರ್ ಬಾಲಕಿಯರ ತಂಡಕ್ಕೆ ಸೇರಿದ ಫುಟ್ಬಾಲ್ ಆಟಗಾರ್ತಿಯರು ಈ ಮೊದಲೇ ಕತಾರ್ ಗೆ ಪ್ರಯಾಣಿಸಬೇಕಾಗಿತ್ತು, ಆದರೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ತೆರಳಲು ಸಾಧ್ಯವಾಗಿರಲಿಲ್ಲ. ಆಗಸ್ಟ್ನಲ್ಲಿ ತಾಲಿಬಾನ್ ಉಗ್ರರು ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಈ ಆಟಗಾರ್ತಿಯರು ತಾಲಿಬಾನ್ನಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದರು. 32 ಫುಟ್ಬಾಲ್ ಆಟಗಾರ್ತಿಯರನ್ನು ಪಾಕಿಸ್ತಾನಕ್ಕೆ ಕರೆತರುವ ಕ್ರಮವನ್ನು ಅಲ್ಲಿನ ಸರ್ಕಾರ ಮತ್ತು ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್ (ಪಿಎಫ್ಎಫ್) ಸಹಯೋಗದೊಂದಿಗೆ ಬ್ರಿಟಿಷ್ ಮೂಲದ ಎನ್ಜಿಒ ಫುಟ್ಬಾಲ್ ಫಾರ್ ಪೀಸ್ ಕೈಗೊಂಡಿದೆ.








