ಅಫ್ಘಾನ್ ವಾಯುಪಡೆ ವೈಮಾನಿಕ ದಾಳಿ : 13 ಉಗ್ರರು ಸಾವು
ಕಾಬೂಲ್ : ಅಫ್ಘಾನಿಸ್ತಾನದ ವಾಯುಪಡೆ ವೈಮಾನಿಕ ದಾಳಿ ನಡೆಸಿ ಅಲ್ ಖೈದಾ ಸಂಘಟನೆಯ 11 ಮಂದಿ ಹಾಗೂ ಇಬ್ಬರು ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದೆ.
ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದ ನವಾ ಜಿಲ್ಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಇನ್ನಿಬ್ಬರು ಉಗ್ರರು ಗಾಯಗೊಂಡಿದ್ದಾರೆ.
ಇಲ್ಲಿ ಅಲ್ ಖೈದಾ ಉಗ್ರರು ತಾಲಿಬಾನ್ ಉಗ್ರರಿಗೆ ತರಬೇತಿ ನೀಡುತ್ತಿದ್ದಾರೆಂಬ ಮಾಹಿತಿಯಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಇನ್ನು ಕಳೆದ ವಾರವಷ್ಟೇ ಹೆಲ್ಮಾಂಡ್ ಹಾಗೂ ಕಂದಹಾರ್ ಪ್ರಾಂತ್ಯದಲ್ಲಿ ನಡೆದ ಏರ್ ಸ್ಟ್ರೈಕ್ ನಲ್ಲಿ 10ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel