ತಾಲಿಬಾನ್ ಹಿಡಿತದಲ್ಲಿ ಅಫ್ಘಾನ್ : ದೇಶ ತೊರೆದ ಅಧ್ಯಕ್ಷ
ಅಫ್ಘಾನಿಸ್ತಾನ್ : ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನ್ ನಲ್ಲಿ ತಾಲಿಬಾನ್ ಅಧಿಪತ್ಯ ಸಾಧಿಸಿದೆ. ತಾಲಿಬಾನಿಗಳು ಅತ್ಯಂತ ಸುಲಭವಾಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿದೆ. ಈ ಮೂಲಕ ಅಫ್ಘಾನ್ ಆಡಳಿತ ಉಗ್ರರ ಪಾಲಾಗಿದೆ.
ಇತ್ತ ಅಫ್ಘಾನ್ ನ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದು, ಅಲ್ಲಿನ ಸರ್ಕಾರ ಪತನವಾಗಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಉಪಾಧ್ಯಕ್ಷ ಅಮರುಲ್ಲಾ ಸಾಲೆಹ್ ದೇಶವನ್ನು ತೊರೆದು ಕಜಾಕಿಸ್ತಾನಕ್ಕೆ ತೆರಳಿದ್ದಾರೆ.
ಅಫ್ಘಾನ್ ರಾಜಧಾನಿ ಕಾಬೂಲ್‍ನಾದ್ಯಂತ ನಿಯೋಜನೆಗೊಂಡಿರುವ ತಾಲಿಬಾನ್ ಉಗ್ರರು, ಪೆÇಲೀಸ್ ಸಿಬ್ಬಂದಿ ಬಿಟ್ಟು ಪಲಾಯನ ಮಾಡಿರುವ ಠಾಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವು ನಗರ, ಜಿಲ್ಲೆಗಳಲ್ಲಿ ಮೆರವಣಿಗೆ ಮಾಡುತ್ತಾ ಅಮಾಯಕ ಜನರ ಮನೆಗಳಿಗೆ ನುಗ್ಗಿ ಲೂಟಿ ಮಾಡುತ್ತಿದ್ದಾರೆ.
ಇನ್ನು ತಾಲಿಬಾನಿಗಳು ಅಲಿ ಅಹ್ಮದ್ ಜಲಾಲಿಯನ್ನು ಅವರ ಹೊಸ ಮಧ್ಯಂತರ ಸರ್ಕಾರದ ಮುಖ್ಯಸ್ಥನಾಗಿ ನೇಮಿಸುವ ಸಾಧ್ಯತೆಯಿದೆ.