ಅಫ್ಘಾನಿಸ್ತಾನದ ಬಾಂಬ್ ಸ್ಪೋಟ – ಧಾರ್ಮಿಕ ಮುಖಂಡ ಮುಜಿಬ್ ಉಲ್ ರೆಹಮಾನ್ ಅನ್ಸಾರಿ ನಿಧನ
ಅಫ್ಘಾನಿಸ್ತಾನದ ಹೆರಾತ್ ನಲ್ಲಿ ಭೀಕರ ಸ್ಪೋಟ ಸಂಭವಿಸಿದೆ. ಗುಜರಗಾ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಖ್ಯಾತ ಧಾರ್ಮಿಕ ಮುಖಂಡ ಮುಜಿಬ್ ಉಲ್ ರೆಹಮಾನ್ ಅನ್ಸಾರಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ರೆಹಮಾನ್ ಸೇರಿದಂತೆ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 200 ಜನರು ಗಾಯಗೊಂಡಿದ್ದಾರೆ.
ಮುಸ್ಲಿಮರ ಪವಿತ್ರ ರಂಜಾನ್ ಮಾಸವಾದ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ವೇಳೆ ಸ್ಫೋಟ ಸಂಭವಿಸಿದೆ. ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಹಾಜರಿದ್ದಾಗ ಸ್ಫೋಟ ಸಂಭವಿಸಿದೆ ಮತ್ತು ಸತ್ತವರು ಮತ್ತು ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದೆ.
ಮುಜಿಬುಲ್ ರೆಹಮಾನ್ ಅನ್ಸಾರಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಧಾರ್ಮಿಕ ನಾಯಕ. ಪಾಶ್ಚಿಮಾತ್ಯ ದೇಶಗಳು ಬೆಂಬಲಿಸುವ ಸರ್ಕಾರಗಳನ್ನು ಹೊಗಳುತ್ತಿದ್ದರು ಮತ್ತು ಟೀಕಿಸುತ್ತಿದ್ದರು. ತಾಲಿಬಾನ್‌ಗೆ ತುಂಬಾ ಹತ್ತಿರವಾಗಿದ್ದರು. ತಾಲಿಬಾನ್‌ನ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ಮರಣವನ್ನ ಧೃಡಕರಿಸಿದ್ದಾರೆ.
ಆದರೆ, ಸ್ಫೋಟದ ಹೊಣೆಯನ್ನು ಇನ್ನೂ ಯಾರೂ ಹೊತ್ತುಕೊಂಡಿಲ್ಲ.








