Afghanistan : ಕಾಬೂಲ್ ನಲ್ಲಿ ಚೀನಾ ಉದ್ಯಮಿಗಳು ತಂಗಿದ್ದ ಹೋಟೆಲ್ ಮೇಲೆ ದಾಳಿ ….
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಚೀನಾದ ಉದ್ಯಮಿಗಳು ತಂಗಿದ್ದ ಹೋಟೆಲ್ ನಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ದೊಡ್ಡ ಪ್ರಮಾಣದ ಸ್ಪೊಟಕ ಮತ್ತು ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರದಿಂದ ಚೀನಾದಿಂದ ಅಫ್ಘಾನಿಸ್ತಾನಕ್ಕೆ ಬರುವ ವ್ಯಾಪಾರಿಗ ಜೀವಕ್ಕೆ ಸಂಚಕಾರ ಹೆಚ್ಚಾಗಿದೆ. ಕಾಬೂಲ್‌ನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಶಹರ್-ಎ-ನಾವ್ ಘಟನೆ ನಡೆದಿದೆ.
ಅಪರಿಚಿತ ಸಂಖ್ಯೆಯ ದಾಳಿಕೋರರು ಹೋಟೆಲ್‌ಗೆ ಪ್ರವೇಶಿಸಿದ್ದಾರೆ ಎಂದು ಪಾಕಿಸ್ತಾನ ಮೂಲದ ತಾಲಿಬಾನ್ ಮೂಲವೊಂದು ಎಎಫ್‌ಪಿಗೆ ತಿಳಿಸಿದೆ. ದಾಳಿಕೋರರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು, ಗುಂಡಿನ ದಾಳಿ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಚೀನಾ ಮತ್ತು ಅಫ್ಘಾನಿಸ್ತಾನದ ನಡುವೆ 76 ಕಿಲೋಮೀಟರ್ ಗಡಿ ಇದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಚೀನಾ ಅಧಿಕೃತವಾಗಿ ಗುರುತಿಸುವುದಿಲ್ಲ. ಆದರೆ ರಾಜತಾಂತ್ರಿಕ ಸಂಬಂಧಗಳು ಪರಿಪೂರ್ಣ ಮಟ್ಟದಲ್ಲಿ ನಡೆಯುತ್ತಿವೆ.
ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ನೆಲೆಸಿರುವ ಉಯಿಘರ್ ಮುಸ್ಲಿಂ ಪ್ರತ್ಯೇಕತಾವಾದಿಗಳಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿರುವ ಬಗ್ಗೆ ಚೀನಾ ಬಹಳ ಹಿಂದಿನಿಂದಲೂ ಚಿಂತಿಸುತ್ತಿದೆ. ಭಯೋತ್ಪಾದಕರಿಗೆ ಆಶ್ರಯ ನೀಡುವುದಿಲ್ಲ ಎಂದು ತಾಲಿಬಾನ್ ಚೀನಾಕ್ಕೆ ಭರವಸೆ ನೀಡಿದೆ. ಇದಕ್ಕೆ ಪ್ರತಿಯಾಗಿ ಚೀನಾ ತಾಲಿಬಾನ್‌ಗೆ ಆರ್ಥಿಕ ನೆರವು ನೀಡುತ್ತಿದೆ.
Afghanistan : Explosions, firing at hotel where Chinese businessmen stay








