ಧೋನಿ ದಾಖಲೆಯನ್ನು ಸಮಗೊಳಿಸಿದ ಅಫಘಾನಿಸ್ತಾನ ನಾಯಕ ಅಸ್ಗರ್ ಅಫ್ಘನ್
Afghanistan skipper equals Mahendra singh Dhoni’s record
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಅಫಘಾನಿಸ್ತಾನ ತಂಡದ ನಾಯಕ ಅಸ್ಗರ್ ಅಫ್ಘನ್ ಸಮಗೊಳಿಸಿದ್ದಾರೆ.
ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ನಾಯಕನಾಗಿ ಗರಿಷ್ಠ ಪಂದ್ಯವನ್ನು ಗೆದ್ದ ದಾಖಲೆ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಇದೀಗ ಅಫಘಾನಿಸ್ತಾನ ನಾಯಕ ಅಸ್ಗರ್ ಅಫ್ಘನ್ ಕೂಡ ಧೋನಿಯ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ಅಲ್ಲದೆ ಧೋನಿ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 72 ಟಿ-ಟ್ವೆಂಟಿ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 41 ಪಂದ್ಯಗಳನ್ನು ಗೆದ್ದಿದ್ದರು.
ಅದೇ ರೀತಿ ಅಫಘಾನಿಸ್ತಾನ ತಂಡ ಜಿಂಬಾಬ್ವೆ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯವನ್ನು ಗೆದ್ದುಕೊಂಡಿತ್ತು. ಅಷ್ಟೇ ಅಲ್ಲ, ನಾಯಕ ಅಸ್ಗರ್ ಅಫ್ಘನ್ ಅವರು ನಾಯಕನಾಗಿ 41 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಇನ್ನುಳಿದಂತೆ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೊರ್ಗಾನ್ ಅವರು ನಾಯಕನಾಗಿ 33 ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ಶಫ್ರಾಝ್ ಅಹಮ್ಮದ್ ಅವರು 29 ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿದ್ರೆ, ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಡರೇನ್ ಸಮಿ 27 ಪಂದ್ಯಗಳನ್ನು ಗೆದ್ದು ಐದನೇ ಸ್ಥಾನದಲ್ಲಿದ್ದಾರೆ.
#Afghanistan #Mahendra singh Dhoni #teamindia #bcci #cricket #worldcricket #saakshatv #saakshatvsports #Afghanistan skipperAsgharAfghan #Asghar Afghan @t-20cricket