African Swine Fever – ಕೊಡಗಿನಲ್ಲಿ ಹಂದಿಗಳ ಮಾರಣಹೋಮ
ಮಡಿಕೇರಿ : ಮಲೆನಾಡಿನ ಭಾಗದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಹಂದಿಗಳ ಮಾರಣ ಹೋಮವೇ ನಡೆದು ಹೋಗಿದೆ.
ಕಳೆದ 2 ತಿಂಗಳ ಅವಧಿಯಲ್ಲಿ ಗಾಳಿಬೀಡು ಗ್ರಾಮದ ಪ್ರಶಾಂತ್ ಮತ್ತು ಗಣಪತಿ ಎಂಬವರ ಹಂದಿ ಸಾಕಾಣಿಕೆ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಹಂದಿಗಳು ಈ ಆಫ್ರಿಕನ್ ಹಂದಿ ಜ್ವರಕ್ಕೆ ಬಲಿಯಾಗಿವೆ.
ಇದರಿಂದ ಹಂದಿ ಸಾಗಾಣಿಕೆ ಕೇಂದ್ರಗಳು, ಸುತ್ತಮುತ್ತಲ ರೈತರಲ್ಲಿ ಆತಂಕ ಎದುರಾಗಿದೆ.
ಏಕಾಏಕಿ ಹಂದಿಗಳು ಸಾವುತ್ತಿದ್ದಂತೆ ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು.
ಅಲ್ಲಿನ ಲ್ಯಾಬಿನಲ್ಲಿ ಅದನ್ನ ಪರೀಕ್ಷೆಗೆ ಒಳಪಡಿಸಿದಾಗ ಸಾವನ್ನಪ್ಪಿದ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ.
ಇತ್ತ ಹಂದಿಗಳ ಸಾವಿನಿಂದಾಗಿ ಲಕ್ಷಾಂತರ ರೂಪಾಯಿ ಲಾಸ್ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅತ್ತ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ರೋಗ ಹರಡದಂತೆ ತಡೆಯಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ.
ಹಂದಿ ಸಾಕಾಣಿಕಾ ಕೇಂದ್ರದ 1 ಕಿಲೋ ಮೀಟರ್ ವ್ಯಾಪ್ತಿ ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಿದೆ.








