ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ ಕಳೆದ 10 ತಿಂಗಳಿಂದ ಮುಚ್ಚಿದ್ದ ಶಾಲಾ-ಕಾಲೇಜಗಳು ರಾಜ್ಯಾದ್ಯಂತ ಆರಂಭವಾಗಿವೆ.
ಕೊರೊನಾ ಹೆಮ್ಮಾರಿ ಹೋಯ್ತು ಎನ್ನುತ್ತಿರುವಾಗಲೇ ವಕ್ಕರಿಸಿದ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಶಾಲೆ-ಕಾಲೇಜಗಳನ್ನು ಆರಂಭಿಸಲಾಗಿದೆ.
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಹಾಗೂ 6ನೇ ತರಗತಿಯಿಂದ 9ನೇ ಕ್ಲಾಸ್ವರೆಗಿನ ವಿದ್ಯಾಗಮ ತರಗತಿಗಳು ಪುನಾರಂಭಗೊಂಡಿವೆ. ಇದರ ಬೆನ್ನೇ ಕೋವಿಡ್ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಜ್ಯಾದ್ಯಂತ ಶಾಲೆಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 9 ಗಂಟೆಗೆ ರಾಜ್ಯಾದ್ಯಂತ 10ನೇ ತರಗತಿ ಹಾಗೂ 12ನೇ ಕ್ಲಾಸ್ನ ತರಗತಿಗಳು ಆರಂಭವಾಗಿವೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ತರಗತಿ ಆರಂಭಿಸುವ ಮೊದಲು ಶಾಲೆ-ಕಾಲೇಜುಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಮಕ್ಕಳನ್ನು ಕೊಠಡಿಯೊಳಗೆ ಕೂರಿಸಲಾಗಿದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಕೆಲವೊಂದು ಕಡೆ ಮಕ್ಕಳನ್ನು ಆಕರ್ಷಿಸಲು ಹೂವು-ತೋರಣಗಳಿಂದ ಅಲಂಕರಿಸಿ ಸ್ವಾಗತಿಸಲಾಗಿದೆ.
ಶಾಲೆ ಅರಂಭಕ್ಕೆ ಗೈಡ್ಲೈನ್ಸ್..
* ಮಕ್ಕಳು-ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
* ಕೊರೊನಾ ಲಕ್ಷಣಗಳಿಲ್ಲ ಎಂಬುದರ ಬಗ್ಗೆ ಪೋಷಕರಿಂದ ಅನಮತಿ ಪತ್ರ
* 10 ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೊರೊನಾ ರಿಪೋರ್ಟ್ ತರುವುದು ಕಡ್ಡಾಯ
* ತರಗತಿ ಪ್ರವೇಶಕ್ಕೂ ಮುನ್ನ ಪ್ರತಿದಿನ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
* ಪ್ರತಿ ಶಾಲೆಯಲ್ಲಿ ದೈಹಿತ ಅಂತರ ಕಾಯ್ದುಕೊಳ್ಳಬೇಕು.
* ಒಂದು ಕೊಠಡಿಯಲ್ಲಿ ಕೇವಲ 15 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳಬೇಕು
* ಶಿಕ್ಷಕರಿಗೆ ಮಾಸ್ಕ್, ಫೇಸ್ಶೀಲ್ಡ್ ಕಡ್ಡಾಯ
* ತರಗತಿ ಮುಗಿದ ಬಳಿಕ ಕೊಠಡಿಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು
* ಶಾಲೆಯಲ್ಲಿ ಬಿಸಿಯೂಟ, ಕ್ಷೀರಭಾಗ್ಯದ ಹಾಲು ನೀಡುವಂತಿಲ್ಲ
* ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಬಾಕ್ಸ್ ತರುವಂತಿಲ್ಲ, ಮನೆಗೆ ಹೋಗಿ ಊಟ ಮಾಡಬೇಕು.
* ಶಾಲೆಯಲ್ಲಿ ತಣ್ಣೀರು ಕುಡಿಯದಂತೆ ನೋಡಿಕೊಳ್ಳಬೇಕು. ಶಾಲೆಗಳು ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಮನೆಯಿಂದ ಮಕ್ಕಳು ಬಿಸಿ ನೀರನ್ನು ತರಬೇಕು
* ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರೀಡಾ ಚಟುವಟಿಕೆ ನಡೆಸುವಂತಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel