ಹೆಣ್ಣು ಮಗುವಿಗಾಗಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ವಾಷಿಂಗ್ಟನ್ : ಹೆಣ್ಣು ಮಗು ಪಡೆಯುವ ಆಸೆಯಿಂದ ಅಮೆರಿಕಾದ ಮಿಚಿಗಾನ್ ರಾಜ್ಯದ ಮಹಿಳೆಯೊಬ್ಬರು ಬರೋಬ್ಬರಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಅಚ್ಚರಿ ಎನಿಸಿದರೂ ನಂಬಲೇಬೇಕಾದ ಸತ್ಯ.
ಹೌದು..! ನಾವು ಸಾಮಾನ್ಯವಾಗಿ ಗಂಡು ಮಗುವಿಗಾಗಿ ಹೆಣ್ಣು ಮಗುವನ್ನು ಹೆತ್ತು ಕಾಯುವುದನ್ನು ನೋಡಿದ್ದೇವೆ. ಆದರೆ ಅಮೆರಿಕಾದ ಮಿಚಿಗಾನ್ ಪ್ರದೇಶದ 45 ವರ್ಷದ ಕಟೇರಿ ಶ್ವಾಂಡ್ಟ್ ಎಂಬ ಮಹಿಳೆ ಹೆಣ್ಣು ಮಗುವಿಗಾಗಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಅದೂ ಬರೋಬ್ಬರಿ ಮೂರು ದಶಕಗಳ ಬಳಿಕ. ಕಟೇರಿ ಶ್ವಾಂಡ್ಟ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟಿದ ಸಮಯದಲ್ಲಿ 3.4 ಕೆ.ಜಿ ತೂಕವಿದ್ದ ಮ್ಯಾಗಿ ಜಯ್ನೆಯನ್ನು 14 ಸಹೋದರರು ಸ್ವಾಗತಿಸಿದ್ದಾರೆ. ಕಟೇರಿ ಹಾಗೂ ಇವರ ಪತಿ ಜೇ ಇಬ್ಬರೂ 45 ವರ್ಷದವರಾಗಿದ್ದು, ಹೆಣ್ಣು ಮಗು ಜನಿಸಿದ್ದಕ್ಕೆ ಅತೀವ ಸಂತಸಪಟ್ಟಿದ್ದಾರೆ.
ಅಂದಹಾಗೆ ಕಟೇರಿ ಹಾಗೂ ಜೇ ಗೇಲಾರ್ಡ್ ಹೈ ಸ್ಕೂಲ್ ಹಾಗೂ ಗೇಲಾರ್ಡ್ ಸೇಂಟ್ ಮೇರಿಸ್ ಹೈ ಸ್ಕೂಲ್ ನಿಂದ ಡೇಟಿಂಗ್ ಮಾಡುತ್ತಿದ್ದರು.
1993ರಲ್ಲಿ ಇಬ್ಬರೂ ಫೇರಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಪದವೀಧರರಾಗುವ ಮೊದಲೇ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದ್ದರು. ಕುಟುಂಬ ಬೆಳೆಯುತ್ತಿದ್ದರೂ ದಂಪತಿ ಮಾತ್ರ ಓದನ್ನು ಮುಂದುವರಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel