ವ್ಯಕ್ತಿ ನಾಪತ್ತೆಯಾದ 14 ವರ್ಷಗಳ ಬಳಿಕ ದೂರು ದಾಖಲು !!
ಚಾಮರಾಜನಗರ: ವ್ಯಕ್ತಿಯೊಬ್ಬ ಕಾಣೆಯಾದ 14 ವರ್ಷದ ನಂತರ ಕುಟುಂಬಸ್ಥರು ಪೊಲೀಸ್ ಠಾಣೆಗೆಎ ದೂರು ನೀಡಲು ಬಂದ ಘಟನೆ ಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
54 ವರ್ಷದ ವ್ಯಕ್ಕಿ ಕಾಣೆಯಾಗಿದ್ದು, ಈತನ್ನು ಹುಡುಕಿಕೊಡಿ ಎಂದು ವ್ಯಕ್ತಿಯ ಸಹೋದರಿ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಕೆ ನಡೆಸುತ್ತಿದ್ದಾರೆ.
ನಡೆದಿದ್ದೇನು? ಈ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದರು. ಈ ಇಬ್ಬರು ಮಕ್ಕಳೂ ಕೆಲ ದಿನಗಳ ಅಂತರದಲ್ಲೇ ತೀರಿಕೊಂಡಿದ್ದರು. ಇದಾದ ನಂತರ ವ್ಯಕ್ತಿ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದ. ಹೀಗಾಗಿ 2008 ನವೆಂಬರ್ 14 ರಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಇನ್ನೂವರೆಗು ವಾಪಸ್ಸಾಗಿಲ್ಲ. ಮನೆಯವರು ಈತನನ್ನು ಎಷ್ಟು ಹುಡುಕಿದರು ಸಿಗಲಿಲ್ಲ.
ವ್ಯಕ್ತಿ ನಾಪತ್ತೆಯಾಗಿದ್ದನ್ನು ಪೊಲೀಸರಿಗೆ ದೂರು ಕೊಡಬೇಕೆಂದು ಅರಿವಿಲ್ಲದಿದ್ದ ಹಿನ್ನೆಲೆಯಲ್ಲಿ ಇಲ್ಲಿಯವರಗೂ ದೂರು ನೀಡಿರಲಿಲ್ಲ. ಈಗ ದೂರು ಕೊಡುತ್ತಿದ್ದು, ಆತನನ್ನು ಹುಡುಕಿಕೊಡಿ ಎಂದು ದೂರುದಾರೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಸದ್ಯ, ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.