ನವದೆಹಲಿ : ಸಿಕ್ಕಿಂನ ನಕು ಲಾ ಗಡಿಯಲ್ಲಿ ಭಾರತೀಯ ಯೋಧರ ಜೊತೆ ಘರ್ಷಣೆಗಿಳಿದಿದ್ದ ಚೀನಾ ಸೇನೆ, ಲಡಾಖ್ ನಲ್ಲೂ ಭಾರತೀಯ ಸೇನೆ ಜೊತೆ ಕ್ಯಾತೆ ತೆಗೆದಿರೋದು ತಡವಾಗಿ ಬಹಿರಂಗವಾಗಿದೆ.
ವಿವಾದಿತ ‘ಫಿಂಗರ್ 5’ ಪ್ರದೇಶದಲ್ಲಿ ಮೂರು ಕಡೆಗಳಲ್ಲಿ ಎರಡೂ ಸೇನೆಗಳ ನಡುವೆ ಘರ್ಷಣೆ ನಡೆದಿದೆ. ನಂತರ ಬ್ರಿಗೇಡಿಯರ್ ಮಟ್ಟದ ಅಧಿಕಾರಿಗಳ ಮಾತುಕತೆ ಮೂಲಕ ಪರಿಸ್ಥಿತಿಯನ್ನ ತಿಳಿಗೊಳಿಸಲಾಗಿದೆ. ಘರ್ಷಣೆ ವೇಳೆ ಉಭಯ ಸೇನೆಗಳ 250ಕ್ಕೂ ಹೆಚ್ಚು ಯೋಧರು, ಕಲ್ಲು ಹಾಗೂ ರಾಡ್ ಗಳಿಂದ ಹೊಡೆದಿದ್ದಾರೆ. ಈ ವೇಳೆ ಎರಡೂ ಕಡೆಯ ಯೋಧರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ಬಳಿಕ ಎರಡೂ ದೇಶಗಳೂ ಹೆಚ್ಚುವರಿ ಸೇನೆಯನ್ನ ನಿಯೋಜನೆಗೊಳಿಸಿವೆ. ಅಲ್ಲಿನ ಕಮಾಂಡರ್ ಗಳು ಕೂಡ ಹಾಟ್ ಲೈನ್ ನ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಕೊಳ್ಳುತ್ತಿದ್ದಾರೆ.








