IND Vs SA – ರಾಹುಲ್ನಿಂದ ದ್ವಿಶತಕದ ನಿರೀಕ್ಷೆ, ವಿಕೆಟ್ ಗಾಗಿ ಆಫ್ರಿಕಾ ಕಾತರ…

ಸೆಂಚುರಿಯನ್ ಟೆಸ್ಟ್ನ ಮೊದಲ ದಿನ ಭಾರತೀಯ ಬ್ಯಾಟ್ಸ್ಮನ್ಗಳ ಅದ್ಭುತ ಪ್ರದರ್ಶನದ ನಂತರ ಟೀಂ ಇಂಡಿಯಾ ದೊಡ್ಡ ಸ್ಕೋರ್ನತ್ತ ಸಾಗಿದೆ. ಭಾರತ ತಂಡ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಅಜಿಂಕ್ಯ ರಹಾನೆ ಮತ್ತು ಕೆಎಲ್ ರಾಹುಲ್ ಔಟಾಗದೆ ಉಳಿದಿದ್ದಾರೆ. ಟೆಸ್ಟ್ನ ಎರಡನೇ ದಿನ ಅಜಿಂಕ್ಯ ರಹಾನೆ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಅಜಿಂಕ್ಯ ಅವರ ಬ್ಯಾಟ್ ನಿಂದ ರನ್ ಹರಿದುಬರುತ್ತಿಲ್ಲ. ಆದಾಗ್ಯೂ, ಅವರು ಸೆಂಚುರಿಯನ್ ಟೆಸ್ಟ್ನ ಮೊದಲ ದಿನ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. 81 ಎಸೆತಗಳನ್ನ ಎದುರಿಸಿ 40 ರನ್ ಗಳಿಸಿದರು.
ಮೊದಲ ದಿನದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಎರಡನೇ ದಿನ ದ್ವಿಶತಕ ಸಿಡಿಸಬಹುದು. ಅವರು ಅಜೇಯ 122 ರನ್ ಗಳಿಸಿದ್ದಾರೆ. ಇಲ್ಲಿಯವರೆಗೂ ಭಾರತದ ಯಾವುದೇ ಆರಂಭಿಕ ಆಟಗಾರ ಆಫ್ರಿಕನ್ ನೆಲದಲ್ಲಿ ದ್ವಿಶತಕ ಸಿಡಿಸಿಲ್ಲ. ದಕ್ಷಿಣ ಆಫ್ರಿಕಾ ಎರಡನೇ ದಿನ ವಿಕೆಟ್ಗಾಗಿ ಎದುರು ನೋಡುತ್ತಿದೆ. ಮೊದಲ ದಿನ ಆಫ್ರಿಕನ್ ಬೌಲರ್ಗಳ ಪ್ರದರ್ಶನ ಅಷ್ಟೇನು ವಿಶೇಷವಾಗಿರಲಿಲ್ಲ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್ಗೆ 117 ರನ್ ಸೇರಿಸಿದರು. ಮಯಾಂಕ್ ಔಟಾದ ಬಳಿಕ ಬ್ಯಾಟಿಂಗ್ ಗೆ ಬಂದ ಚೇತೇಶ್ವರ ಪೂಜಾರ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಅದೇ ವೇಳೆಗೆ ಸೆಂಚುರಿಯನ್ ಟೆಸ್ಟ್ನಲ್ಲಿ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಅವರು 35 ರನ್ ಗಳಿಸಿ ಲುಂಗಿ ಎನ್ಗಿಡಿ ಎಸೆತದಲ್ಲಿ ವಿಯಾನ್ ಮುಲ್ಡರ್ಗೆ ಕ್ಯಾಚ್ ನೀಡಿದರು.
ವಿರಾಟ್ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಗಳಿಸಿದ್ದರು. ಇಂದಿನ ಇನ್ನಿಂಗ್ಸ್ ಸೇರಿ ಕಳೆದ 59 ಇನ್ನಿಂಗ್ಸ್ಗಳಿಂದ ಒಂದೇ ಒಂದು ಶತಕ ದಾಖಲಾಗಿಲ್ಲ….








