ಆಂಧ್ರ ನಿಗೂಢ ಕಾಯಿಲೆ ಪ್ರಕರಣ : ಸಾವಿನ ಸಂಖ್ಯೆ 3ಕ್ಕೇರಿಕೆ 585 ಮಂದಿ ಅಸ್ವಸ್ಥ..!
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ನಗರದಲ್ಲಿ ಇತ್ತೀಚೆಗೆ ನಿಗೂಢ ಸೋಂಕು ಕಾಣಿಸಿಕೊಂಡು ಜನರನ್ನ ಆತಂಕಕ್ಕೆ ಈಡು ಮಾಡಿದೆ. ಈ ನಿಗೂಢ ಕಾಯಿಲೆಯಿಂದ ಇದೀಗ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ನಿಗೂಢ ಸೋಂಕಿಗೆ ಮೂವರು ಬಲಿಯಾದಂತಾಗಿದೆ.
ನೆಟ್ಟಿಗನ ಪ್ರಶ್ನೆಗೆ ಚಪ್ಪಲಿ ಬ್ರ್ಯಾಂಡ್ ಕೇಳ್ಬೇಡಿ ಅಂದಿದ್ದು ಯಾಕೆ ಸ್ಮೃತಿ ಇರಾನಿ..!
ಇನ್ನೂ ಸೋಂಕಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಒಟ್ಟಾರೆ ಅಸ್ವಸ್ಥರ ಸಂಖ್ಯೆ ಸಂಖ್ಯೆ 585ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು ಚಿಕಿತ್ಸೆ ಫಲಕಾರಿಯಾದೇ 56 ವರ್ಷದ ಸುಬ್ಬರವಮ್ಮ, 50 ವರ್ಷದ ಚಂದ್ರ ರಾವ್ ಎಂಬುವವರು ಬಲಿಯಾಗಿದ್ದಾರೆ. ಇನ್ನೂ ಈ ಹಿಂದೆ ಈ ನಿಗೂಢ ಕಾಯಿಲೆಯಿಂದ 45 ವರ್ಷದ ಶ್ರೀಧರ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಈ ನಿಗೂಢ ಕಾಯಿಲೆಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದರು.
ಇನ್ನೂ ಅಸ್ವಸ್ಥರಿಗೆ ವಿಜಯವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಒಟ್ಟಾರೆ ಕೊರೊನಾ ಹಾವಳಿ ನಡುವೆ ನಿಗೂಢ ಸೋಂಕಿನ ಜನನ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel