ಬೀಜಿಂಗ್: ಕೊರೊನಾ ವೈರಸ್ ನ ಹುಟ್ಟೂರು ಚೀನಾದಲ್ಲಿ ಮತ್ತೆ ಭೀತಿ ಆವರಿಸಿದೆ. ಕೆಲ ದಿನಗಳ ಹಿಂದೆ ಚೀನಾ ಸುಸ್ಥಿತಿಗೆ ಬಂದಿದೆ ಎಂದು ದೇಶಾದ್ಯಂತ ಥಿಯೇಟರ್‌ಗಳು ತೆರೆದುಕೊಂಡಿದ್ವು. ಸಿನಿಮಾ ಪ್ರದರ್ಶನಕ್ಕೆ ಅಲ್ಲಿನ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಇದೀಗ ಡ್ರ‍್ಯಾಗನ್ ದೊರೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಮತ್ತೆ ಎಲ್ಲಾ ಥಿಯೇಟರ್ ಗಳನ್ನ ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ.
ಆದರೆ ಯಾವ ಕಾರಣಕ್ಕೆ ಮರಳಿ ಥಿಯೇಟರ್ ಬಂದ್ ಮಾಡಲು ಆದೇಶ ನೀಡಲಾಗಿದೆ ಅನ್ನೋ ಸ್ಪಷ್ಟನೆ ಇಲ್ಲದಿದ್ದರೂ. ಚೀನಾ ಕೊರೊನಾದ ಎರಡನೇ ಅಲೆ ಅಪ್ಪಳಿಸುವ ಭೀತಿಯಲ್ಲಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇನ್ನು ಚೀನಾ ಸರ್ಕಾರದ ಈ ನಿರ್ಧಾರದಿಂದ ಅಲ್ಲಿನ ಜನರು ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಚಿತ್ರ ನಿರ್ಮಾಪಕರಿಗೆ ದೊಡ್ಡ ಶಾಕ್!
ಸರ್ಕಾರದ ಈ ನಿರ್ಧಾರ ಚಿತ್ರ ನಿರ್ಮಾಪಕರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ ವಾರವಷ್ಟೇ ಶಾಂಘೈನ ಮಹಾನಗರ ಪಾಲಿಕೆ ಸುಮಾರು 200 ಥಿಯೇಟರ್ ಗಳಿಗೆ ಸಿನಿಮಾ ಪ್ರದರ್ಶನ ಮತ್ತೆ ಶುರುಮಾಡಲು ಅನುಮತಿ ನೀಡಿತ್ತು. ಈಗ ಮತ್ತೆ ಆದೇಶವನ್ನು ವಾಪಸ್ ಪಡೆದಿದ್ದು ಚಿತ್ರ ನಿರ್ಮಾಪಕರಿಗೆ ದೊಡ್ಡ ತಲೆನೋವು ತಂದಿಟ್ಟಿದೆ.ಸರ್ಕಾರದ ಈ ರೀತಿಯ ನಿರ್ಧಾರಗಳು ಸ್ಥಳೀಯ ಉದ್ಯಮದ ಜೊತೆಗೆ ಚಿತ್ರ ನಿರ್ಮಾಪಕರಿಗೂ ಕಂಟಕ ತಂದಿಡಲಿವೆ ಎಂದು ಚೀನಾ ಫಿಲ್ಮ್ ಗ್ರೂಪ್ ಆತಂಕ ವ್ಯಕ್ತಪಡಿಸಿದೆ.








