ದಶಕದಲ್ಲಿ ಮಯಾಂಕ್ ಒಬ್ಬನೇ.. ವೀರೂ ದಾಖಲೆ ಚಿಂದಿ agarwal saaksha tv
ಮುಂಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವರ್ಸಸ್ ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ.
ವಾಂಖೆಡೆ ಮೈದಾನದಲ್ಲಿ ಅಗರ್ ವಾಲ್ ಸಿಡಿಸಿದ್ದು ಕೇವಲ ಸೆಂಚೂರಿ ಅಲ್ಲ, ಹಲವಾರು ಟೀಕೆಗಳಿಗೆ ಉತ್ತರ.
ಆರಂಭಿಕರಾಗಿ ಮಯಾಂಕ್ ವೇಸ್ಟ್ ಎಂದವರಿಗೆ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಗರ್ ವಾಲ್ ಉತ್ತರ ಕೊಡುತ್ತಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮೆನ್ ಗಳು ಏಜಾಜ್ ಪಟೇಲ್ ಸ್ಪಿನ್ ದಾಳಿ ಸಿಲುಕಿ ಒದ್ದಾಡುತ್ತಿದ್ದಾರೆ.
ಒಂದೊಂದು ರನ್ ಕದಿಯಲು ಟೀಂ ಇಂಡಿಯಾದ ಆಟಗಾರರು ಪರದಾಡುತ್ತಿದ್ದಾರೆ. ಆದ್ರೆ ಕನ್ನಡಿಗ ಮಯಾಂಕ್ ಅಗರ್ ವಾಲ್ ಒಂದೊಂದು ರನ್ ಪೋಣಿಸಿಕೊಂಡು ಶತಕದ ಮಾಲೆಯನ್ನ ಹಾಕಿಕೊಂಡಿದ್ದಾರೆ.
ಈ ಶತಕ ಟೀಕಾರರಿಗೆ ಉತ್ತರ ಮಾತ್ರವಲ್ಲದೇ ಅಪರೂಪದ ದಾಖಲೆಗೂ ಸಾಕ್ಷಿಯಾಗಿದೆ.

ಮುಂಬೈ ನಲ್ಲಿ ಸೆಂಚೂರಿ ಸಿಡಿಸುವ ಮೂಲಕ ಮಯಾಂಕ್ ಅಪರೂಪದ ದಾಖಲೆ ಬರೆದಿದ್ದಾರೆ.
ಕಳೆದ ಒಂದು ದಶಕದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ನೆಲದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ ಮಯಾಂಕ್.
ಇದಕ್ಕೂ ಮುನ್ನ 2010ರಲ್ಲಿ ಅಹಮದಾಬಾದ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‍ನಲ್ಲಿ ನವಾಬ್ ಗಢದ ನವಾಬ ವೀರೇಂದ್ರ ಸೆಹ್ವಾಗ್ ಶತಕ ಸಿಡಿಸಿದ್ದರು.
ಆ ಬಳಿಕ ಟೀಂ ಇಂಡಿಯಾದ ಯಾವ ಆರಂಭಿಕ ಆಟಗಾರನೂ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿರಲಿಲ್ಲ.
ಇದೀಗ ಮಯಾಂಕ್ ಕಿವೀಸ್ ವಿರುದ್ಧ ಶತಕ ಬಾರಿಸಿದ್ದಾರೆ. ಆ ಮೂಲಕ 2014ರ ನಂತರ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ 2014ರಲ್ಲಿ ಆಕ್ಲೆಂಡ್‍ನಲ್ಲಿ ಕಿವೀಸ್ ವಿರುದ್ಧ ಶಿಖರ್ ಧವನ್ ಶತಕ ಸಿಡಿಸಿದ್ದರು.








