ಹದ್ದುಗಳ ತರಬೇತುದಾರರು ಬೇಕಾಗಿದ್ದಾರೆ. ಯಾರಾದರೂ ಇದ್ದಾರಾ ಅಥವಾ ಪರಿಚಯ ಇದ್ದರೆ ತಿಳಿಸಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಅರೇ ಇದೇನಪ್ಪ ಕಳ್ಳಕಾಕರ, ದುಷ್ಟ-ದುರುಳ ಅಟ್ಟಹಾಸ ಮಟ್ಟ ಹಾಕಬೇಕಾದವರು, ಧಿಡೀರ್ ಅಂತ ಹದ್ದುಗಳ ಪಳಗಿಸುವವರ ಹಿಂದೆ ಬಿದ್ದಿದ್ದಾರೆ. ಏನಾದರೂ ಹದ್ದು ಪಳಗಿಸುವವರು
ದುಷ್ಕøತ6ಯವೆಸಗಿ ಪರಾರಿಯಾಗಿದ್ದಾರಾ ಅಂತ ಭಾವಿಸ್ಕೊಂಡ್ರ. ಹಾಗೇನಾದ್ರೂ ನೀವು ಅಂನ್ಕೊಂಡಿದ್ರೆ ಅದು ತಪ್ಪು ಕಲ್ಪನೆ.
ಹದ್ದು ಪಳಗಿಸುವವರು ಬೇಕು ಅಂತ ಭಾಸ್ಕರ್ ರಾವ್ ಅವರ ಕೇಳುತ್ತಿರುವುದು ನಿಜ, ಆದರೆ ಯಾರೋ ಖದೀಮರ ಹಿಡಿಯಲೋ ಅಥವಾ ಯಾವುದಾದರೂ ಸ್ಪರ್ಧೆ ಕಳುಹಿಸುವುದಕ್ಕಲ್ಲ, ಬದಲಾಗಿ ಅಪಾಯಕಾರಿ ಎನಿಸುವ ಡ್ರೋನ್‍ಗಳನ್ನು ಹೊಡೆದುರಳಿಸಲು.
ಹೌದು, ಇತ್ತೀಚಿನ ದಿನಗಳಲ್ಲಿ ಡ್ರೋನ್‍ಗಳ ಬಳಕೆ ಅತ್ಯಂತ ಸಾಮಾನ್ಯ ಎನ್ನುವಂತಾಗಿದೆ. ಇಂತಹ ಡ್ರೋಣ್ ಬಳಕೆಯು ಎಷ್ಟು ಪ್ರಯೋಜನವೋ, ಅಷ್ಟೆ ಅಪಾಯಕಾರಿ. ಇಂತಹ ಅಪಾಯಕಾರಿ ಎನಿಸುವ ಡ್ರೋನ್‍ಗಳನ್ನು ಹೊಡೆದುರಳಿಸಲು ಹದ್ದುಗಳ ಬಳಸಿಕೊಳ್ಳಲು ಯೋಚಿಸಲಾಗುತ್ತಿದೆ.
ಕೆಲ ದೇಶಗಳಲ್ಲಿ ಅಪಾಯಕಾರಿ ಡ್ರೋನ್‍ಗಳನ್ನು ಹೊಡೆದುರಳಿಸಲು ಹದ್ದುಗಳನ್ನು ಪಳಗಿಸಿ,
ತರಬೇತಿ ನೀಡಿ ಬಳಕೆ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಬೆಂಗಳೂರಿನಲ್ಲೂ ಅಕ್ರಮವಾಗಿ ಹಾಗೂ ಅಪಾಯಹೊಡ್ಡುವಂತ ಡ್ರೋಣ್ ಕ್ಯಾಮರಾಗಳನ್ನು ಹೊಡೆದುರುಳಿಸಲು ಹದ್ದುಗಳ ಸಹಾಯ ಬೇಕಾಗಿರುವುದುರಿಂದ ಹೀಗೆ ಹದ್ದು ತರಬೇತುದಾರರು ಬೇಕು ಅಂತ ಪೋಸ್ಟ್ ಮಾಡಿದ್ದಾರೆ.