ನವದೆಹಲಿ : ತೀವ್ರ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಇಂದು ಎರಡು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇನ್ನೂ ಈ ಮಸೂದೆಗಳಿಗೆ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು, ಸಂಸತ್ತಿನಲ್ಲಿಯೂ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಸಸಂಸತ್ ಗದ್ದಲದ ನಡುವೆಯೂ ಮಸೂದೆಗಳನ್ನ ಅಂಗೀಕರಿಸಲಾಗಿದೆ.
ಉತ್ತೇಜನ ಮತ್ತು ಸೌಲಭ್ಯ ಮಸೂದೆ- 2020 ಹಾಗೂ ರೈತರ ಸಬಲೀಕರಣ ಮತ್ತು ರಕ್ಷಣೆ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ವಿಧೇಯಕ-2020 ಕ್ಕೆ ಸಂಸತ್ತಿನಲ್ಲಿ ಅನುಮೋದನೆ ನೀಡಲಾಯಿತು.