ಕೋವಿಡ್ 2ನೇ ಅಲೆ – ದೇಶದಲ್ಲಿ ಸಾವನಪ್ಪಿದ ವೈದ್ಯರ ಸಂಖ್ಯೆ ಎಷ್ಟು ಗೊತ್ತಾ..?
ನವದೆಹಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಹಗಲಿರುಳು ಜನರ ರಕ್ಷಣೆಗಾಗಿ ಪ್ರಾಣವನ್ನ ಪಣಕಿಟ್ಟು ಕಷ್ಟ ಪಡುತ್ತಿರುವ ವೈದ್ಯರನ್ನ ಹೆಮ್ಮಾರಿ ಕೊರೊನಾ ಬಲಿಪಡೆದಿದೆ. ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ದೇಶಾದ್ಯಂತ ಸುಮಾರು 270 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾಹಿತಿ ನೀಡಿದೆ.
ಇಂದು ಬೆಳಗ್ಗೆಯಷ್ಟೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದರು. ಡಾ. ಅಗರ್‌ವಾಲ್ (62) ಈ ಮೊದಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರನ್ನು ಕಳೆದ ವಾರ ಏಮ್ಸ್‌ಗೆ ದಾಖಲಿಸಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೇ ಏಮ್ಸ್ ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವೈದ್ಯರ ಕುರಿತ ದತ್ತಾಂಶಗಳನ್ನು ನೀಡಿದೆ. ದೇಶದಲ್ಲಿ 2ನೇ ಅಲೆ ಸಂದರ್ಭದಲ್ಲಿ 270 ಮಂದಿ ವೈದ್ಯರು ಸಾವನ್ನಪ್ಪಿದ್ದು, ಈ ಪೈಕಿ ಬಿಹಾರದಲ್ಲಿ ಅತ್ಯಧಿಕ ಮಂದಿ (78) ವೈದ್ಯರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 37 ಮಂದಿ, ದೆಹಲಿ 29 ಮಂದಿ ಮತ್ತು ಆಂಧ್ರ ಪ್ರದೇಶದಲ್ಲಿ 22 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಇನ್ನು ಮೊದಲ ಅಲೆ ವೇಳೆ ದೇಶದಲ್ಲಿ 748 ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಆದರೆ 2ನೇ ಅಲೆ ಆರಂಭವಾಗಿ 2 ತಿಂಗಳಲ್ಲಿಯೇ 270 ಮಂದಿ ವೈದ್ಯರು ಜೀವಕಳೆದುಕೊಂಡಿದ್ದಾರೆ. ಕೊರೋನಾ ಸೋಂಕಿನ 2ನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿದ್ದು, ಪ್ರಮುಖವಾಗಿ ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಮಂದಿ ಸಿಬ್ಬಂದಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಐಎಂ ಅಧ್ಯಕ್ಷ ಡಾ. ಜೆಎ ಜಯಲಾಲ್ ಹೇಳಿದ್ದಾರೆ.
ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿರುವ ವೈದ್ಯರಿಗೆ ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ನೀಡಲಾಗಿತ್ತು. ಶೇ.90ರಷ್ಟು ಮಂದಿಗೆ ಮೊದಲ ಡೊಸ್ ನೀಡಲಾಗಿದ್ದು, ಶೇ.66ರಷ್ಟು ಮಂದಿಗೆ ಮಾತ್ರ ಎರಡನೆ ಡೊಸ್ ನೀಡಲಾಗಿದೆ. ದಿನ ನಿತ್ಯ ಸಾವಿಗೆ ಮುಖಾಮುಖಿಯಾಗಿ ನಿಂತು ಹೋರಾಡುವ ವೈದ್ಯಕೀಯ ಸಮುದಾಯದ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.
ಈ ಮಾರಕ ಕಾಯಿಲೆಯಿಂದಾಗಿ ಅನೇಕ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ರೆ , ಇನ್ನೂ ಹಲವರು ಕುಟುಂಬಸ್ಥರು , ಆಪ್ತರು , ಸ್ನೇಹಿತರನ್ನ ಕಳೆದುಕೊಂಡಿದ್ದಾರೆ.. ಮತ್ತು ಹಲವು ಕುಟುಂಬಗಳ ಆಧಾರಸ್ಥಂಬವೆನಿಸಿಕೊಂಡಿದ್ದರು ಕೊರೊನಾಗೆ ಬಲಿಯಾಗಿದ್ದು, ಕುಟುಂಬಗಳು ದಿಚ್ಚು ತೋಚದ ಪರಿಸ್ಥಿತಿಗೆ ತಲುಪಿವೆ.. ಸಿನಿಮಾ ತಾರೆಯರು ಮೃತಪಟ್ಟಿದ್ದಾರೆ. ಸೆಲೆಬ್ರಿಟಿಗಳು ಸಹ ತಮ್ಮವರನ್ನ ಕಳೆದುಕೊಂಡಿದ್ದಾರೆ.. ಇನ್ನೂ ವಿಪರ್ಯಾಸವೆಂದ್ರೆ ಮದುವೆಗೆ ಇನ್ನು ಒಂದೆರೆಡು ದಿನಗಳಿರುವಾಗಲೇ ವರ ಅಥವ ವಧು ಮೃತಪಟ್ಟಿರುವ ಘಟನೆಗಳು , ಮದುವೆಯಾದ ವಾರ -10 ದಿನಗಳೊಳಗೇ ಗಂಡ ಅಥವ ಹೆಂಡತಿ ಸಾವನಪ್ಪಿರುವುದು ಇಂತಹ ಮನಕಲುಕುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








