air polution
ದೆಹಲಿ ವಾಯುಮಾಲಿನ್ಯದ ಬಗ್ಗೆ ಮತ್ತೆ ಮತ್ತೆ ಹೇಳೋ ಅವಶ್ಯಕತೆಯಿಲ್ಲ. ಅಷ್ಟರ ಮಟ್ಟಿಗೆ ಅಲ್ಲಿನ ವಾತಾವರಣ ಕಲುಶಿತಗೊಂಡಿರೋದು ಇಡೀ ದೇಶದ ಜನರಿಗೆ ಗೊತ್ತಿರೋ ವಿಚಾರ. ಸದ್ಯ ಸರ್ಕಾರ ಮಾಲಿನ್ಯ ತಡೆಗಟ್ಟಲು ಅನೇಕ ಕ್ರಮಗಳನ್ನ ಕೈಗೊಳ್ಳುತ್ತಿದೆ. ಅದರ ಭಾಗವಾಗಿಯೇ ಇದೀಗ ಹೊಸ ನಿಯಮ ಜಾರಿಗೊಳಿಸುವ ಮೂಲಕ ಜನರಿಗೆ ಶಾಕ್ ನೀಡಿದೆ.
ಹೌದು ದೆಹಲಿ – NCR ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಾತಾವಣ ಮಲಿನಗೊಳಿಸುವವರ ವಿರುದ್ಧ 5 ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಆಗ್ಞೆ ಹೊರೆಡಿಸಿದೆ. ಅಲ್ಲದೇ 5 ವರ್ಷಗಳ ವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ. ಹೆಚ್ಚುತ್ತಿರುವ ವಾಯುಮಾಲಿನ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 
ಅಲ್ಲದೇ ಈಗಾಗಲೇ ಇದಕ್ಕಾಗಿ ಕೇಂದ್ರ ಆಯೋಗವನ್ನು ರಚಿಸಿದೆ. ಇದ್ರಲ್ಲಿ ಇಸ್ರೋ ಪ್ರತಿನಿಧಿಗಳು ಸೇರಿರುತ್ತಾರೆ. ದೆಹಲಿ-ಎನ್ಸಿಆರ್, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಯುಪಿಯಲ್ಲಿ ಹೆಚ್ಚಾಗುತ್ತಲೇ ಇರುವ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಆಯೋಗವನ್ನು ರಚಿಸಿದೆ. ಈ ಆಯೋಗವು ವಾಯುಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಲಿದೆ. ಕೆಲಸದ ಮೇಲ್ವಿಚಾರಣೆ ಮಾಡಲಿದೆ.
ಉಗ್ರರಿಗೆ ಹಣಕಾಸು ನೆರವು ಆರೋಪ : ದೆಹಲಿ, ಕಾಶ್ಮೀರ ಸೇರಿ ಹಲವೆಡೆ ದಾಳಿ ಮುಂದುವರೆಸಿದ NIA
ಅದು ಅಲ್ಲದೇ ದೀಪಾವಳಿ ಸಮೀಪದಲ್ಲೇ ಇರುವ ಹಿನ್ನೆಲೆ ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ಅನೇಕ ಅಭಿಯಾನಗಳನ್ನು ನಡೆಸಲಾಗ್ತಿದೆ. ಆದ್ರೆ ತಕ್ಕ ಪ್ರಯೋಜನಗಳು ಆಗ್ತಿಲ್ಲ. ಹೀಗಾಗಿ ದೆಹಲಿ ಸರ್ಕಾರ ಗ್ರೀನ್ ದೆಹಲಿ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
air polution
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








