ತಾಲಿಬಾನ್ ನೆಲೆಗಳ ಮೇಲೆ ಏರ್ ಸ್ಟ್ರೈಕ್ : 254 ಉಗ್ರರ ಹತ್ಯೆ
ಕಂದಹಾರ್ : ತಾಲಿಬಾನ್ ಉಗ್ರರ ನೆಲೆಗಳ ಮೇಲೆ ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ಏರ್ ಸ್ಟ್ರೈಕ್ ನಡೆಸಿದ್ದು, 254 ತಾಲಿಬಾನ್ ಉಗ್ರರು ಹತರಾಗಿದ್ದಾರೆ ಮತ್ತು 97 ಉಗ್ರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ರಾತ್ರಿ ಅಫ್ಘಾನಿಸ್ತಾನದ ಕಂದಹಾರ್ ಏರ್ ಪೋರ್ಟ್ ಮೇಲೆ ತಾಲಿಬಾನ್ ಉಗ್ರರು ಮೂರು ರಾಕೆಟ್ ದಾಳಿ ನಡೆಸಿದ್ದರು.
ಇದರ ಬೆನ್ನಲ್ಲೇ ಇಂದು ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ತಾಲಿಬಾನ್ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದಾರೆ.
ತಾಲಿಬಾನ್ ಉಗ್ರರ ಒಟ್ಟು 13 ವಿವಿಧ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆದಿದ್ದು, 254 ತಾಲಿಬಾನ್ ಉಗ್ರರು ಹತರಾಗಿದ್ದಾರೆ.
ಅಫ್ಘಾನಿಸ್ತಾನದಿಂದ ಯುಎಸ್ ಸೇನೆಯ ಬಹುತೇಕ ಸೈನಿಕರು ಹಿಂದೆ ಸರಿದಿದ್ದಾರೆ. ಈ ಮಧ್ಯೆ ತಾಲಿಬಾನ್ ಉಗ್ರರು ಮತ್ತು ಅಫ್ಘಾನಿಸ್ತಾನ ಭದ್ರತಾ ಪಡೆಗಳ ನಡುವಿನ ಹಿಂಸಾಚಾರವೂ ಜಾಸ್ತಿಯಾಗಿದೆ.









