Airtel – ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಏರ್ ಟೆಲ್ ನೆಟ್ವರ್ಕ್ ಡೌನ್…
ದೆಹಲಿ, ಜೈಪುರ, ಕೋಲ್ಕತ್ತಾ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಏರ್‌ಟೆಲ್ ನೆಟ್‌ವರ್ಕ್ ಡೌನ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಏರ್‌ಟೆಲ್‌ನ ನೆಟ್‌ವರ್ಕ್ ಸ್ಥಗಿತಗೊಂಡಿರುವ ಬಗ್ಗೆ ಗ್ರಾಹಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. Twitter ನಲ್ಲಿ #AirtelDown ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಏರ್ ಟೆಲ್ ಬಳಕೆದಾರರು ಮೊಬೈಲ್ ಇಂಟರ್ನೆಟ್ ಮತ್ತು ಕರೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಡೌನ್ ಡಿಟೆಕ್ಟರ್ ಪ್ರಕಾರ, ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಜೈಪುರ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಏರ್‌ಟೆಲ್ ನೆಟ್‌ವರ್ಕ್ ಡೌನ್ ಆಗಿದೆ. ಅನೇಕ ಬಳಕೆದಾರರು ಬ್ರಾಡ್‌ಬ್ಯಾಂಡ್‌ನೊಂದಿಗಿನ ಸಮಸ್ಯೆಗಳ ಬಗ್ಗೆಯೂ ದೂರಿದ್ದಾರೆ. ಏರ್‌ಟೆಲ್ ಥ್ಯಾಂಕ್ಸ್ ಆಪ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ಹೇಳಿಕೊಂಡಿದ್ದಾರೆ.
ಏರ್‌ಟೆಲ್ ಟ್ವೀಟ್ ಮಾಡಿದ್ದು, ನೆಟ್ ವರ್ಕ್ ಸ್ಥಗಿತದ ಬಗ್ಗೆ ಮಾಹಿತಿ ಬಂದಿದೆ. ಕಂಪನಿಯು, ‘ನಮ್ಮ ಇಂಟರ್ನೆಟ್ ಸೇವೆಗಳಲ್ಲಿ ತಾತ್ಕಾಲಿಕವಾಗಿ ತೊಂದರೆಯಾಗಿದೆ. ಮತ್ತು ನಿಮಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು ನಮ್ಮ ತಂಡಗಳು ಪಟ್ಟುಬಿಡದೆ ಕೆಲಸ ಮಾಡುತ್ತಿವೆ. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಎಂದು ಟ್ವೀಟ್ ಮಾಡಿದೆ.
ಕಳೆದ ವಾರ ಮುಂಬೈ ವಲಯದಲ್ಲಿ ಜಿಯೋ ನೆಟ್‌ವರ್ಕ್ ಡೌನ್ ಆಗಿತ್ತು. ಮುಂಬೈನಲ್ಲಿ ರಿಲಯನ್ಸ್ ಜಿಯೋ ಸೇವೆ ಮತ್ತೊಮ್ಮೆ ಸ್ಥಗಿತಗೊಂಡಿತ್ತು.








