ನವದೆಹಲಿ : ಟಿಕ್ ಟಾಕ್ ಬಂದ ಮೇಲೆ ಜನಪ್ರಿಯ ನಟ-ನಟಿಯರಂತೆ ಇರುವ ಅದೆಷ್ಟೋ ಯುವಕ ಯುವತಿಯರು ಕಾಣಸಿಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್ ರನ್ನೇ ಹೋಲುವ ಚೆಲುವೆಯೊಬ್ಬಳು ಟಿಕ್ ಟಾಕ್ ನಲ್ಲಿ ಸಖತ್ ಫೇಮಸ್ ಆಗುತ್ತಿದ್ದಾಳೆ.
ಅಮ್ಮೂಸ್ ಅಮೃತ ಹೆಸರಿನ ಟಿಕ್ ಟಾಕ್ ಅಕೌಂಟ್ ಹೊಂದಿರುವ ಹುಡುಗಿಯೊಬ್ಬಳು ಐಶ್ವರ್ಯಾ ರೈ 2000 ರಲ್ಲಿ ಮುಮ್ಮಟ್ಟಿಯೊಡನೆ ನಟಿಸಿ ಹಿಟ್ ಆಗಿದ್ದ ‘ಕಂಡುಕೊಂಡೆನ್ ಕಂಡುಕೊಂಡೆನ್’ ತಮಿಳು ಸಿನಿಮಾದ ಡೈಲಾಗ್ ವೊಂದನ್ನು ಲಿಪ್ ಸಿಂಕ್ ಮಾಡಿ ಡಬ್ ಮಾಡಿದ್ದಾಳೆ. ಈ ವಿಡಿಯೋದಲ್ಲಿ ಯುವತಿ ಪಕ್ಕಾ ಐಶ್ವರ್ಯಾ ಥರಾನೇ ಕಾಣುತ್ತಾಳೆ. ಆಕೆಯ ಹಾವಭಾವ, ನೋಟ ಎಲ್ಲವೂ ರೈ ಅವರನ್ನೇ ಹೋಲುತ್ತಿದೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಹಲವರು ಅಮ್ಮೂಸ್ ಅಮೃತಾಳಿಗೆ ಐಶ್ವರ್ಯಾ ರೈ ಜೆರಾಕ್ಸ್ ಎಂದು, ಇನ್ನೂ ಕೆಲವರು ಐಶ್ವರ್ಯಾ ರೈ ಕಾರ್ಬನ್ ಕಾಪಿ ಎಂದು ಕಮೆಂಟ್ ಮಾಡಿ, ಈ ಟಿಕ್ ಟಾಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.








