ಆರ್ ಆರ್ ಆರ್ ಜ್ಯೂ. ಎನ್ ಟಿ ಆರ್ ಗೆ ನಾಯಕಿ ಸಿಕ್ಕಾಯ್ತು..!
ಪ್ರಸ್ತುತ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗ್ತಾಯಿದೆ.
ಕೆಲವೊಮ್ಮೆ ವಿವಾದಕ್ಕೆ ಮತ್ತೆ ಕೆಲವೊಮ್ಮೆ ಟೈಟಲ್ ಪೋಸ್ಟರ್ ಗೆ. ಅಂದ್ಹಾಗೆ ಈ ಬಾರಿ ಸಿನಿಮಾ ಸುದ್ದಿಯಲ್ಲಿರೋದು ಚಿತ್ರದ ನಾಯಕ ಜ್ಯೂ. ಎನ್ ಟಿ ಆರ್ ಅವರ ನಾಯಕಿಯ ವಿಚಾರಕ್ಕೆ.
ಹೌದು ಬಹುಕುತೂಹಲ ಹುಟ್ಟಿಸಿರುವ ಕೋಮರಂ ಭೀಮ್ ಪಾತ್ರಧಾರಿ ಜೂ.ಎನ್ಟಿಆರ್ ಗೆ ನಾಯಕಿ ಯಾರೆಂಬುದರ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ದಕ್ಷಿಣ ಭಾರತದ ಖ್ಯಾತ ಸಂಕಲನಕಾರ ಕೋಲ ಭಾಸ್ಕರ್ ವಿಧಿವಶ
ಈ ಹಿಂದೆ ಬ್ರಿಟನ್ ಸುಂದರಿ ಒಲಿವಿಯಾ ಮೋರಿಸ್ ಜೂ.ಎನ್ಟಿಆರ್ ಗೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು.
ಆದರೆ ಹೊಸ ಸುದ್ದಿಯೆಂದರೆ ಜೂ.ಎನ್ಟಿಆರ್ ಎದುರು ನಾಯಕಿಯಾಗಿ ತಮಿಳಿನ ನಟಿಯೊಬ್ಬರು ಆಯ್ಕೆ ಆಗಲಿದ್ದಾರಂತೆ.
ತಮಿಳಿನ ನಟಿ ಐಶ್ವರ್ಯಾ ರಾಜೇಶ್ ಜ್ಯೂ. ಎನ್ ಟಿ ಆರ್ ಗೆ ನಾಯಕಿಯಾಗಲಿದ್ದಾರೆ ಎಂಬುದು ಉನ್ನತ ಮೂಲಗಳಿಂದ ಸದ್ಯಕ್ಕೆ ತಿಳಿದುಬಂದಿದೆ.
ಬುಡಕಟ್ಟು ಹೆಣ್ಣುಮಗಳ ಪಾತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ನಾಯಕಿಯಾಗಿ ಮಿಂಚೋದರ ಜೊತೆಗೆ ಕೆಲ ಆಕ್ಷನ್ ದೃಶ್ಯಗಳ ಮೂಲಕವೂ ಜನರನ್ನ ರಂಜಿಸಲಿದ್ದಾರಂತೆ ಐಶ್ವರ್ಯ.
ರಾಜಕೀಯ ತಿರುವು ಪಡೆದ ಪೂನಂ ಪಾಂಡೆ ಅಶ್ಲೀಲ ವಿಡಿಯೋ..!
ಇತ್ತ ಚಿತ್ರದಲ್ಲಿ ರಾಮಚರಣ್ ಕೂಡ ನಾಯಕನಾಗಿದ್ದು, ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಬಣ್ಣ ಹಚ್ಚಿದ್ದಾರೆ.
ಅಂದ್ಹಾಗೆ ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿದ್ದು, ಆಲಿಯಾ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










