ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೂ ಕೊರೊನಾ ದೃಢ
ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅವರಿಗೂ ಕೊರೊನಾ ಸೋಂಕಿರುವುದು ದೃಢವಾಗಿದೆ. ಈ ಬಗ್ಗೆ ಅವರೇ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಐಶ್ವರ್ಯ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೇ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ನನ್ನೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ, ಹಾಗೇ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಕೋವಿಡ್ ಟೆಸ್ಟ್ ನಲ್ಲಿ ಅರ್ಜುನ್ ಸರ್ಜಾ, ಪತ್ನಿ ಆಶಾರಾಣಿ ಹಾಗೂ ಕಿರಿಯ ಪುತ್ರಿ ಅಂಜನಾ ಮೂವರ ವರದಿ ನೆಗೆಟಿವ್ ಬಂದಿದೆ. ಐಶ್ವರ್ಯ ಅವರಿಗೆ ಕೊರೊನಾ ದೃಢವಾದ ಹಿನ್ನೆಲೆ ಎಲ್ಲರೂ ಮುನ್ನೆಚರಿಕೆ ತೆಗೆದುಕೊಂಡು ಐಶ್ವರ್ಯ ಅವರನ್ನು ಮನೆಯಲ್ಲಿ ಪತ್ಯೇಕವಾಗಿ ಇರಿಸಿದ್ದಾರೆ.









