AishwaryaChit Fund
ಬೆಂಗಳೂರಿನಲ್ಲಿನ ಐಶ್ವರ್ಯ ಚಿಟ್ಸ್ ಫಂಡ್ನಲ್ಲಿ ಇದುವರೆಗೂ 12 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಆಗಿರುವುದು ತಿಳಿದು ಬಂದಿದ್ದು. ಈ ಬಗ್ಗೆ 134 ಜನರು ಈ ವರೆಗೂ ವಂಚನೆಯ ದೂರು ದಾಖಲಿಸಿದ್ದಾರೆ. ಐಶ್ವರ್ಯಲಕ್ಷ್ಮಿ ಚಿಟ್ಸ್ ಫಂಡ್ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದುವರೆಗೂ 134 ಮಂದಿ ಹಣ ಕಳೆದುಕೊಂಡಿರುವವರು ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ದೂರುಗಳು ಬರುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್ನಲ್ಲಿ 2018ರಲ್ಲಿ ಪಟೇಲ್ ಆನಂದ್ ಎಂಬುವರು ಪತ್ನಿ, ಮಕ್ಕಳು ಸೇರಿ ಐಶ್ವರ್ಯ ಲಕ್ಷ್ಮಿ ಚಿಟ್ಫಂಡ್ ಆರಂಭಿಸಿದ್ದರು. ಚಿಟ್ಫಂಡ್ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ್ದರು. ಅಂದಿನಿಂದ ಹಣ ಹೂಡಿಕೆ ಮಾಡಿರುವ ಗ್ರಾಹಕರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಹಣ ಕೊಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ದೂರು ನೀಡಿರುವ ಆರೋಪಿಗಳ ಪೈಕಿ ಬಸವೇಶ್ವರನಗರದ ನಿವಾಸಿಯಾಗಿರು ದೀಪಾ ಸಹ ಒಬ್ಬರು. ಇವರು 2018ರಲ್ಲಿ 10 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದರು. ಇದೀಗ ಅವರಿಗೆ ಸುಮಾರು 17 ಲಕ್ಷ ರೂಪಾಯಿ ಹಣ ಬರಬೇಕಿದ್ದು, ಅವರು ವಂಚನೆಗೊಳಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದುವರೆಗೂ 134 ಮಂದಿ ದೂರು ನೀಡಿದ್ದಾರೆ. ಇನ್ನು ಹಲವರು ದೂರು ನೀಡುವ ಸಾಧ್ಯತೆ ಇದೆ. ಇನ್ನೂ ವಂಚನೆಗೆ ಒಳಗಾದವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
AishwaryaChit Fund
ಮತ್ತೆ ಹೆಚ್ಡಿಕೆ-ಬಿಎಸ್ವೈ ಭೇಟಿ; ಕುತೂಹಲ ಮೂಡಿಸಿದೆ ರಾಜಾಹುಲಿ-ದಳಪತಿ ಪ್ಲ್ಯಾನ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel