ಕೊರೊನಾ ಸಂಕಷ್ಟ – ತುರ್ತು ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ ಅಜಯ್ ದೇವಗನ್..!
ಮುಂಬೈ : ಕೊರೊನಾ ಸಂಕಷ್ಟದ ನಡುವೆ ಜನರು ಪರದಾಡುತ್ತಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಸಿಗದೇ , ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ಪರದಾಡುತ್ತಿದ್ದಾರೆ. ಅನೇಕರು ಕೊನೆಯುಸಿರೆಳೆದಿದ್ಧಾರೆ. ಇಂತಹ ಸಂದರ್ಭದಲ್ಲಿ ಅನೇಕ ತಾರೆಯರು ಬಡವರಿಗಾಗಿ ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
ಬಾಲಿವುಡ್ ನ ಸಿಂಗಂ ಅಜಯ್ ದೇವಗನ್ ಅವರು ಮುಂಬೈನಲ್ಲಿ ತುರ್ತು ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ್ದಾರೆ. ಮುಂಬೈನ ಹಿಂದೂಜ ಆಸ್ಪತ್ರೆ ಜೊತೆ ಕೈ ಜೋಡಿಸಿ ಶಿವಾಜಿ ಪಾರ್ಕ್ ನಲ್ಲಿ ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ್ದಾರೆ.
ಬಿಎಂಸಿಯ ಶಿವಾಜಿ ಪಾರ್ಕ್ ನಲ್ಲಿರುವ ಸಭಾಂಗಣದಲ್ಲಿ 20 ಹಾಸಿಗೆಯ ಕೋವಿಡ್ ಸೌಲಭ್ಯವನ್ನು ಸ್ಥಾಪಿಸಿದ್ದಾರೆ. ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯವಿರುವ ಈ ತುರ್ತು ಕೇಂದ್ರ ಸ್ಥಾಪನೆಗೆ ಅಜಯ್ ದೇವಗನ್ ಜೊತೆ ಅನೇಕರು ಬಾಲಿವುಡ್ ಮಂದಿ ನೆರವಾಗಿದ್ದಾರೆ. ಬೋನಿ ಕಪೂರ್, ಲವ್ ರಂಜನ್, ಸಮೀರ್ ನಾಯರ್, ಆನಂದ್ ಪಂಡಿತ್ ಸೇರಿದಂತೆ ಅನೇಕರು 1 ಕೋಟಿ ರೂ. ನೆರವು ನೀಡಿದ್ದಾರೆ.








