ರನ್ ವೇ 34 ಅಜಯ್ ದೇವಗನ್ ಅವರ ಬಹುನಿರೀಕ್ಷೆಯ ಸಿನಿಮಾವಾಗಿತ್ತು. ಅವರದ್ದೇ ಡೈರೆಕ್ಷನ್ ,, ಅವರೇ ನಟಿಸಿದ್ದರು… ಆದ್ರೆ KGF 2 ಮುಂದೆ ಸಿನಿಮಾ ಫ್ಲಾಪ್ ಆಗಿಬಿಟ್ಟಿತ್ತು.. ಹೀನಾಯವಾಗಿ ಸೋತಿತ್ತು…
ಅದೊಂದೇ ಅಲ್ಲ ,, ಸದ್ಯಕ್ಕೆ 2022 ರಲ್ಲಿ ಭೂಲ್ ಭುಲಯ್ಯ , ದಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಇನ್ಯಾವ ಬಾಲಿವುಡ್ ಸಿನಿಮಾಗಳು ಕೂಡ ಯಶಸ್ಸು ಕಂಡಿಲ್ಲ.. ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ..
ಈ ನಡುವೆ ಮತ್ತೊಮ್ಮೆ ಡೈರೆಕ್ಷನ್ ಗೆ ಇಳಿದಿದ್ದಾರೆ ಅಜಯ್ ದೇವಗನ್.. ‘ಭೋಲಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೌನ್ಸ್ ಮಾಡ್ತಿದ್ದಂತೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ..
ಉತ್ತಮ ನಟ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಅಜಯ್ ದೇವಗನ್ ಈ ಹಿಂದೆ ನಿರ್ದೇಶನದಲ್ಲೂ ಛಾಪು ಮೂಡಿಸುತ್ತಿದ್ದಾರೆ.. ರನ್ ವೇ ಗೂ ಮೊದಲು ಅವರು ಶಿವಾಯ್ , ಯು ಮಿ ಔರ್ ಹಮ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು..
ಅಂದ್ಹಾಗೆ ಭೋಲಾ ಸಿನಿಮಾ ತಮಿಳಿನ ಕಾರ್ತಿ ನಟನೆಯ ಕೈತಿ ಸಿನಿಮಾದ ರೀಮೇಕ್ ಆಗಿದೆ.. ಭೋಲಾ ಚಿತ್ರದಲ್ಲಿ ಅಜಯ್ ದೇವಗನ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.