ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ- ಮುಂಬೈ ತಂಡಕ್ಕೆ ಅಜಿಂಕ್ಯಾ ರಹಾನೆ ಸಾರಥ್ಯ
ಸಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ದೇಶಿ ಕ್ರಿಕೆಟ್ ಟೂರ್ನಿಗೆ ಮುಂಬೈ ತಂಡವನ್ನು ಆಯ್ಕೆ ಮಾಡಲಾಗಿದೆ. ಮುಂಬೈ ತಂಡವನ್ನು ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಅವರು ಮುನ್ನಡೆಸಲಿದ್ದಾರೆ.
ಕಳೆದ ಬಾರಿ ವಿಜಯಾ ಹಜಾರೆ ಟೂರ್ನಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ಪೃಥ್ವಿ ಶಾ ಅವರನ್ನು ಉಪನಾಯಕನ್ನಾಗಿ ನೇಮಕ ಮಾಡಲಾಗಿದೆ.
ಸಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿ ನವೆಂಬರ್ 4ರಿಂದ ಆರಂಭವಾಗಲಿದೆ. ಎಲೈಟ್ ವಿಭಾಗದ ಬಿ ಗುಂಪಿನಲ್ಲಿ ಮುಂಬೈ ತಂಡ, ಕರ್ನಾಟಕ, ಸರ್ವಿಸಸ್, ಬೆಂಗಾಲ್ ಮತ್ತು ಚತ್ತೀಸ್ಗಢ್ ಮತ್ತು ಬರೋಡಾ ತಂಡಗಳನ್ನು ಲೀಗ್ ನಲ್ಲಿ ಎದುರಿಸಲಿದೆ.
ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಥಾಕೂರ್ ಅವರು ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಈ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಆದಿತ್ಯ ತಾರೆ, ಶಿವಮ್ ದುಬೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮುಂಬೈ ತಂಡ
ಅಜಿಂಕ್ಯಾ ರಹಾನೆ (ನಾಯಕ), ಪೃಥ್ವಿ ಶಾ (ಉಪನಾಯಕ), ಆದಿತ್ಯ ತಾರೆ, ಶಿವಮ್ ದುಬೆ, ತುಷಾರ್ ದೇಶಪಾಂಡೆ, ಸಫ್ರಾಝ್ ಖಾನ್, ಪ್ರಶಾಂತ್ ಸೋಲಂಕಿ, ಶಮ್ರ್ಸ್ ಮುಲಾನಿ, ಅಥರ್ವ ಅಂಕೊಲೆಕರ್, ಧವನ್ ಕುಲಕರ್ಣಿ, ಹಾರ್ದಿಕ್ ತಾಮೊರೆ, ಮೊಹಿತ್ ಆಶ್ವತಿ, ಸಿದ್ದೇಶ್ ಲಾಡ್, ಸಾಯಿರಾಜ್ ಪಾಟಿಲ್, ಅಮಾನ್ ಖಾನ್, ಅರ್ಮಾನ್ ಜಾಫರ್, ಯಶಸ್ವಿ ಜೈಸ್ವಾಲ್, ತನುಷ್ ಕೋಟ್ಯಾನ್, ದೀಪಕ್ ಶೆಟ್ಟಿ, ರೋಸ್ಟಾನ್ ಡಯಾಸ್.