ರಾಯ್ ಪುರ್ : ಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ನಿಧನರಾಗಿದ್ದಾರೆ. 74 ವರ್ಷದ ಅಜಿತ್ ಜೋಗಿ ಅವರು ರಾಯ್ ಪುರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಜೋಗಿ ಅವರು ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಮೇ 9 ರಿಂದ ರಾಯ್ ಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
ಜೋಗಿ ಅವರು ಛತ್ತೀಸ್ ಗಢ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ 2000 ನವೆಂಬರ್ ನಿಂದ 2003ರ ನವೆಂಬರ್ ವರೆಗೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಜೋಗಿ ಅವರು ಮತ್ತು ಅವರ ಮಗ ಉಪಚುನಾವಣೆಯ ವಿವಾದದಲ್ಲಿ ಸಿಲುಕಿದ ನಂತರ 2016ರಲ್ಲಿ ಕಾಂಗ್ರೆಸ್ ನಿಂದ ಹೊರ ಬಂದು ಜನತಾ ಕಾಂಗ್ರೆಸ್ ಛತ್ತೀಸ್ ಗಢ ಪಕ್ಷವನ್ನು ಕಟ್ಟಿದ್ದರು.








