Balakrishna | ಅಖಂಡ ಸೀಕ್ವೆಲ್ ಯಾವಾಗ..?
ಅಖಂಡ ಸಿನಿಮಾ ಮೂಲಕ ಟಾಲಿವುಡ್ ನಟ ಸಿಂಹ ಬಾಲಕೃಷ್ಣ ಮತ್ತೆ ಫಾರ್ಮ್ ಗೆ ಬಂದಿದ್ದಾರೆ.
ಒಂದು ಕಡೆ ಸಿನಿಮಾ ಮತ್ತೊಂದು ಕಡೆ ಓಟಿಟಿ ಟಾಕ್ ಶೋ ಗಳ ಮೂಲಕ ಬಾಲಯ್ಯ ಫುಲ್ ಜೋಷ್ ನಲ್ಲಿದ್ದಾರೆ.
ಈ ಮಧ್ಯೆ ಅಖಂಡ ಸಿನಿಮಾದ ಸೀಕ್ವೆಲ್ ಬಗ್ಗೆ ಟಾಲಿವುಡ್ ನಲ್ಲಿ ಸುದ್ದಿ ಹರಿದಾಡುತ್ತಿದೆ.
ಸಿಂಹ, ಲೆಜೆಂಡ್ ನಂತರ ಬಾಲಯ್ಯ ಮತ್ತು ನಿರ್ದೇಶಕ ಬೋಯಪಾಟಿ ಶ್ರೀನು ಕಾಂಬಿನೇಷನ್ ಮೋಡಿ ಮಾಡಿತ್ತು.
ಅಖಂಡ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಹೀಗಾಗಿ ಅಖಂಡ ಸಿಕ್ವೇಲ್ ಗಾಗಿ ಬಾಲಯ್ಯ ನಿರ್ದೇಶಕ ಬೋಯಪಾಟಿ ಮೇಲೆ ಒತ್ತಡ ಹೇರುತ್ತಿದ್ದಾರಂತೆ.
ಅಖಂಡ ಚಿತ್ರದ ನಂತರ ಬನ್ನಿ ಜೊತೆ ಬೋಯಪಟಿ ಸಿನಿಮಾ ಮಾಡಬೇಕಿತ್ತು. ಆದ್ರೆ ಅಲ್ಲು ಅರ್ಜುನ್ ಪುಷ್ಪ 2 ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.
ಹೀಗಾಗಿ ಬೋಯಪಟಿ, ಹೀರೋ ರಾಮ್ ಜೊತೆ ಸಿನಿಮಾ ಘೋಷಿಸಿದ್ದಾರೆ.
ಎನರ್ಜಿಟಿಕ್ ಸ್ಟಾರ್ ಮೂಲಕ ಪ್ಯಾನ್ ಇಂಡಿಯಾ ಮಾರುಕಟ್ಟೆಗೆ ಕಾಲಿಡುತ್ತಿದ್ದಾರೆ.
ಸಿನಿಮಾದ ನಂತರ ಬೋಯಪಟಿ, ಅಖಂಡ 2 ಮೇಲೆ ಗಮನಹರಿಸಲಿದ್ದಾರೆ.
ಅಂದಹಾಗೆ ಅಖಂಡ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅಖಂಡ 2 ಕಥೆಯ ಎಳೆಯನ್ನ ಬಹಿರಂಗಗೊಳಿಸಿದ್ದಾರೆ.
ಹಾಗಾಗಿಯೇ ರಾಮ್ ಜೊತೆಗಿನ ಸಿನಿಮಾ ಕಂಪ್ಲೀಟ್ ಆದ ಕೂಡಲೇ ಅಖಂಡ 2 ಸೆಟ್ಟೆರಲಿದೆ.
akhanda-2-balakrishna-and-boyapati-srinu saaksha tv