1080 ಎಕರೆ ಅರಣ್ಯ ಪ್ರದೇಶ ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ
ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ತಂದೆ ನಾಗೇಶ್ವರ್ ರಾವ್ ಅವರ ನೆನಪಿಗಾಗಿ ವಿಶೇಷ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಭರವಸೆ ನೀಡಿದಂತೆ ತೆಲಂಗಾಣದ ಮೇಡಚಲ್ ಜಿಲ್ಲೆಯ ಚೆಂಗಿಚೆರ್ಲಾದಲ್ಲಿ 1,080 ಎಕರೆ ಅರಣ್ಯ ಭೂಮಿಯನ್ನು ದತ್ತು ಪಡೆದಿದ್ದಾರೆ. ಪತ್ನಿ ಅಮಲಾ ಅಕ್ಕಿನೇನಿ, ಪುತ್ರ ನಾಗ ಚೈತನ್ಯ ಹಾಗು ಇತರ ಕುಟುಂಬ ಸದಸ್ಯರೊಂದಿಗೆ ಸೇರಿ ಶಂಕುಸ್ಥಾಪನೆ ಸಮಾರಂಭವನ್ನ ನೆರವೇರಿಸಿದ್ದಾರೆ.
ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಸವಿನೆನಪಿಗಾಗಿ ಅರಣ್ಯ ಪ್ರದೇಶವನ್ನು ನಗರ ಅರಣ್ಯ ಉದ್ಯಾನವನವಾಗಿ ಪರಿವರ್ತಿಸಲಾಗುತ್ತದೆ. ನಾಗಾರ್ಜುನ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Many happy returns of the day to chief minister Kcr garu!
Happy to announce the adoption and laying the foundation for the ANR URBAN PARK in chengicherla forest area by the Akkineni family
🙏 to #kcr garu and @MPsantoshtrs for this opportunity #greenindiachallenge #HBDKCR pic.twitter.com/HcGZIiKm5k
— Nagarjuna Akkineni (@iamnagarjuna) February 17, 2022
ಡಿಸೆಂಬರ್ 2021 ರಲ್ಲಿ, ನಾಗಾರ್ಜುನ ಅವರು ಬಿಗ್ ಬಾಸ್ ತೆಲುಗು ಬಿಗ್ ಬಾಸ್ ಕಾರ್ಯಕ್ರಮದಲ್ಲಿ 1,000 ಎಕರೆ ಅರಣ್ಯವನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಪ್ರತಿಯೊಬ್ಬರೂ ತಲಾ ಮೂರು ಸಸಿಗಳನ್ನು ನೆಡಬೇಕು ಮತ್ತು 2021 ಕ್ಕೆ ಸೂಕ್ತವಾದ ವಿದಾಯ ಹೇಳಬೇಕೆಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಬಿಗ್ ಬಾಸ್ ತೆಲುಗು ಮುಖ್ಯ ಅತಿಥಿಗಳಲ್ಲಿ ಆಗಮಿಸಿದ್ದರು.
1,080 ಎಕರೆ ಅರಣ್ಯ ಭೂಮಿಯನ್ನು ದತ್ತು ಪಡೆದು ಫೆಬ್ರವರಿ 17 ರಂದು ನಗರ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ನಾಗಾರ್ಜುನ ಅವರು “ಮುಖ್ಯಮಂತ್ರಿ ಕೆಸಿಆರ್ ಅವರಿಗೆ ದಿನದ ಶುಭಾಶಯಗಳು! ಅಕ್ಕಿನೇನಿ ಕುಟುಂಬದಿಂದ ಚೆಂಗಿಚೆರ್ಲಾ ಅರಣ್ಯ ಪ್ರದೇಶದಲ್ಲಿ ANR ಅರ್ಬನ್ ಪಾರ್ಕ್ ಅನ್ನು ದತ್ತು ಸ್ವೀಕರಿಸಿದ್ದಕ್ಕೆ ಮತ್ತು ಅಡಿಪಾಯ ಹಾಕಿದ್ದಕ್ಕೆ ಸಂತೊಷವಾಗಿದೆ. #kcr ಗೆ ಧನ್ಯವಾದಗಳು ಮತ್ತು ಈ ಅವಕಾಶಕ್ಕಾಗಿ ಸಂಸದ ಸಂತೋಷ್ ಕುಮಾರ್ ಧನ್ಯವಾದಗಳೂ” ಎಂದು ಟ್ವೀಟ್ ಮಾಡಿದ್ದಾರೆ.. ಗ್ರೀನ್ ಇಂಡಿಯಾ ಚಾಲೆಂಜ್ ಅಂಗವಾಗಿ ನಾಗಾರ್ಜುನ, ನಾಗ ಚೈತನ್ಯ, ಸುಶಾಂತ್ ಮತ್ತಿತರರು ಗಿಡಗಳನ್ನು ನೆಟ್ಟಿದ್ದಾರೆ.
ಇನ್ನೂ ಸಿನಿಮಾಗೆ ಬರೋದಾದ್ರೆ ನಾಗಾರ್ಜುನ ಮತ್ತು ನಾಗ ಚೈತನ್ಯ ಇಬ್ಬರು ಒಟ್ಟಿಗೆ ಬಂಗರ್ರಾಜು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ಸೊಗ್ಗಡೆ ಚಿನ್ನಿ ನಯನ ಚಿತ್ರದ ಮುಂದುವರಿದ ಭಾಗವಾಗಿದೆ. ಸಂಕ್ರಾಂತಿ ಹಬ್ಬದಂದು ಚಿತ್ರ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು.