Akkineni Nagarjuna : ಗೋವಾದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಟ ನಾಗಾರ್ಜುನ್ ಗೆ ನೋಟೀಸ್…
ಅನಧಿಕೃತವಾಗಿ ಬೆಟ್ಟ ಅಗೆದು ನಿರ್ಮಾಣ ಅಥವಾ ಉತ್ಖನನ ಕಾರ್ಯ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಟಾಲಿವುಟ್ ನಟ ಅಕ್ಕಿನೇನಿ ನಾಗಾರ್ಜುನ್ ಅವರಿಗೆ ನೋಟೀಸ್ ನೀಡಲಾಗಿದೆ.
ಉತ್ತರ ಗೋವಾದ ಮಾಂಡ್ರೆಮ್ ಗ್ರಾಮದಲ್ಲಿ ಬೆಟ್ಟದ ಭಾಗವನ್ನು ಅಗೆದು ಅಕ್ರಮ ನಿರ್ಮಾಣ/ ಉತ್ಖನನ ಕಾರ್ಯ ನಡೆಸಿದ್ದಕ್ಕಾಗಿ ನೋಟಿಸ್ ನೀಡಲಾಗಿದೆ ಎಂದು ಮಾಂಡ್ರೆಂ ಸರಪಂಚ್ ಅಮಿತ್ ಸಾವಂತ್ ಹೇಳಿದ್ದಾರೆ. ಅಕ್ರಮವಾಗಿ ಕಾಮಗಾರಿ ನಡೆಯುತ್ತಿದ್ದು, ಯಾರೂ ದಾಖಲೆ ಸಮೇತ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.
ಅವರು ನಟರೋ ಇಲ್ಲವೋ ನಮಗೆ ಗೊತ್ತಿಲ್ಲ ಕೆಲಸಕ್ಕೆ ಅನುಮತಿ ಇದ್ದರೆ ನಮಗೆ ತೋರಿಸಬೇಕಿತ್ತು . ಕಾನೂನು ಬದ್ಧ ಯೋಜನೆಗಳಿಗೆ ನಾವು ವಿರೋಧಿಗಳಲ್ಲ. ಯಾರಾದರೂ ಆಗಲಿ ಅಕ್ರಮ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಸರಪಂಚ್ ಹೇಳಿದ್ದಾರೆ. ನಮ್ಮ ನೋಟಿಸ್ಗೆ ಸಂಬಂಧಪಟ್ಟವರು ಸ್ಪಂದಿಸದಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ಪಂಚನಾಮೆ ಮಾಡುತ್ತೇವೆ ಎಂದಿದ್ದಾರೆ.
Akkineni Nagarjuna: Notice to actor Nagarjuna for illegal construction in Goa…