Ram Setu: ಅಕ್ಷಯ್ ಕುಮಾರ್, ಜಾಕ್ವಲೀನ್ ಗೆ ಸುಬ್ರಮಣ್ಯ ಸ್ವಾಮಿ ಲೀಗಲ್ ನೋಟಿಸ್…
ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಚಿತ್ರ ರಾಮ್ ಸೇತು ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ರಾಮಸೇತು ವಿಚಾರದಲ್ಲಿ ಕಥೆ ತಿರುಚಿದ್ದಾರೆ ಎಂದು ಬಾಲಿವುಡ್ ನಟರಿಗೆ ಲೀಗಲ್ ನೊಟೀಸ್ ಜಾರಿಗೊಳಿಸಿದ್ದಾರೆ.
ರಾಮ್ ಸೇತು ಸಿನಿಮಾದಲ್ಲಿರುವ ಅಕ್ಷಯ್ ಕುಮಾರ್, ಜಾಕ್ವಲೀನ್ ಫರ್ನಾಂಡೀಸ್ ಹಾಗೂ ಸುಬ್ರಹ್ಮಣಿಯನ್ ಇತರರಿಗೆ ಸ್ವಾಮಿ ಲೀಗಲ್ ನೊಟೀಸ್ ಜಾರಿಗೊಳಿಸಿದ್ದಾರೆ. ಮುಂಬೈ ಸಿನಿಮಾ ವಾಲಾಗಳಿಗೆ ಸುಳ್ಳು ಮತ್ತು ದುರ್ಬಳಕೆಯ ಕೆಟ್ಟ ಅಭ್ಯಾಸವಿದೆ. ಆದ್ದರಿಂದ ಅವರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ತಿಳಿಸುವುದಕ್ಕಾಗಿ ನಾನು ಸತ್ಯ ಸಭರ್ವಾಲ್ ಅಡ್ವೊಕೇಟ್ ಮೂಲಕ ಲೀಗಲ್ ನೊಟೀಸ್ ನ್ನು ರಾಮ ಸೇತು ಕಥೆಯನ್ನು ತಿರುಚಿದ ಅಕ್ಷಯ್ ಕುಮಾರ್ ಹಾಗೂ ಇನ್ನೂ 8 ಮಂದಿಗೆ ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಪುರಾತತ್ವ ಶಾಸ್ತ್ರಜ್ಞನ ಪಾತ್ರದಲ್ಲಿ ಅಕ್ಷಯ್
ರಾಮಸೇತು ಚಿತ್ರದಲ್ಲಿ ಅಕ್ಷಯ್ ಪುರಾತತ್ವಶಾಸ್ತ್ರಜ್ಞನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ರಾಮಸೇತು ಕುರಿತು ಸತ್ಯವನ್ನು ಕಂಡುಹಿಡಿಯುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂಬೈನ ಹೊರತಾಗಿ, ಅಯೋಧ್ಯೆ ಮತ್ತು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.
ಈ ಚಿತ್ರದಲ್ಲಿ ಅಕ್ಷಯ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನುಶ್ರತ್ ಭರುಚಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶನ, ವಿಕ್ರಮ್ ಮಲ್ಹೋತ್ರಾ ಮತ್ತು ಅರುಣಾ ಭಾಟಿಯಾ ಬಂಡವಾಳ ಹೂಡಿದ್ದಾರೆ. ಚಿತ್ರ ಅಕ್ಟೋಬರ್ 24 2022 ಬಿಡುಗಡೆಯಾಗುವ ನಿರೀಕ್ಷೆ ಇದೆ.
ರಾಮಸೇತು ರಕ್ಷಣೆ ಹಾಗೂ ಸಂರಕ್ಷಣೆಗಾಗಿ ಹಾಗೂ ಅಂದಿನ ಕೇಂದ್ರ ಸರ್ಕಾರದ ಸೇತು ಸಮುದ್ರಮ್ ಯೋಜನೆಯನ್ನು ವಿರೋಧಿಸಿ ಸುಬ್ರಹ್ಮಣ್ಯಂ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ರಾಮ ಸೇತು ಒಡೆಯದಂತೆ ಆದೇಶ ನೀಡಿತ್ತು ಇದು ನಂಬಿಕೆ ಮತ್ತು ಪೂಜೆಗೆ ಸಂಬಂಧಿಸಿದ ಆಧಾರದಲ್ಲಿ ಈ ತೀರ್ಪನ್ನು ನೀಡಲಾಗಿದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.